ಒಡಿಶಾ ಮಾಜಿ ಸಿಎಂ ಹೇಮಾನಂದ ಬಿಸ್ವಾಲ್ ವಿಧಿವಶ

Prasthutha|

ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಬುಡಕಟ್ಟು ಮುಖಂಡ ಹೇಮಾನಂದ ಬಿಸ್ವಾಲ್(82) ಶುಕ್ರವಾರ ರಾತ್ರಿ ನಿಧನರಾದರು.  ನ್ಯುಮೋನಿಯಾದಿಂದ ಬಳಲುತ್ತಿದ್ದ ಬಿಸ್ವಾಲ್  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪುತ್ರಿ ಸುನೀತಾ ಹೇಳಿದರು.

- Advertisement -

ಬಿಸ್ವಾಲ್ ಐವರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೊದಲ ಬಾರಿಗೆ 1974ರಂದು ವಿಧಾನಸಭೆಗೆ ಆಯ್ಕೆಯಾಗಿದ್ದ ಬಿಸ್ವಾಲ್ 1977ರಲ್ಲೂ ಪುನರಾಯ್ಕೆಯಾಗಿದ್ದರು. 1980ರಿಂದ 2004ರವರೆಗೂ ಲೈಕೇರಾ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗಿದ್ದ ಅವರು ಸುರೇಂದ್ರಗಢ ಲೋಕಸಭಾ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು.

- Advertisement -

ಝರ್ಸೂಗಢ ಜಿಲ್ಲೆಯಿಂದ ಆರು ಬಾರಿ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು ಎರಡು ಬಾರಿ ಒಡಿಶಾ ಸಿಎಂ ಆಗಿದ್ದರು. ಒಡಿಶಾದ ಪ್ರಥಮ ಬುಡಕಟ್ಟು ಜನಾಂಗದ ಮುಖ್ಯಮಂತ್ರಿ ಎನಿಸಿಕೊಂಡಿದ್ದ ಅವರು 1989 ಡಿಸೆಂಬರ್ 7ರಿಂದ 1990ರ ಮಾರ್ಚ್ 5 ಹಾಗೂ 1999 ಡಿಸೆಂಬರ್ 6 ರಿಂದ 2000 ಮಾರ್ಚ್ 5ರವರೆಗೆ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಝರ್ಸುಗಢ ಜಿಲ್ಲೆಯಲ್ಲಿ ಶಾಲಾ ಶಿಕ್ಷಕರಾಗಿದ್ದಬಿಸ್ವಾಲ್ ಪಂಚಾಯಿತಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಬಿಸ್ವಾಲ್ ಅವರ ನಿಧನಕ್ಕೆ ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ್ ಪಟ್ನಾಯಕ್ ಸಹಿತ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp