ಬೆಂಗಳೂರು: ಮುಡಾ ಪ್ರಕರಣ ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ನಡೆದ ಇಡಿ ದಾಳಿ ಇದೀಗ ಅಂತ್ಯವಾಗಿದೆ.
ಸದ್ಯ ನಟೇಶ್ರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮಲ್ಲೇಶ್ವರಂ ಮನೆಯಿಂದ ನಟೇಶ್ಗೆ ಸೇರಿದ ಕಾರಲ್ಲೇ ಶಾಂತಿನಗರ ಇಡಿ ಕಚೇರಿಗೆ ಅಧಿಕಾರಿಗಳು ಕರೆತಂದಿದ್ದಾರೆ.
ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ ನಟೇಶ್ ಮನೆಗೆ ನಿನ್ನೆ ಬೆಳಗ್ಗೆ 8 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ರಾತ್ರಿ10 ಗಂಟೆಯವರೆಗೂ ದಾಖಲೆಗಳನ್ನು ಜಾಲಾಡಿದ್ದು, 4 ಬ್ಯಾಗ್ ಕೊಂಡೊಯ್ದಿದ್ದರು. ಇಂದು ಕೂಡ ತಲಾಶ್ ಮಾಡಿದ್ದು, ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮುಗಿಸಿ ತೆರಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಆಪ್ತ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಇಡಿ ವಿಚಾರಣೆ ಅಂತ್ಯವಾಗಿದೆ. ಮೈಸೂರಿನ ಹಿನಕಲ್ನಲ್ಲಿರುವ ರಾಕೇಶ್ ಪಾಪಣ್ಣ ಮನೆ ಮೇಲೆ ನಿನ್ನೆ ಬೆಳಗ್ಗೆ 7 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಸತತ 35 ಗಂಟೆ ತನಿಖೆ, ವಿಚಾರಣೆ ನಡೆಸಿ ಇದೀಗ ನಿರ್ಗಮಿಸಿದ್ದಾರೆ.