ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಜೈಲಿನಿಂದ ಬಿಡುಗಡೆ

Prasthutha|

ಮಹಾರಾಷ್ಟ್ರ: ಅಕ್ರಮ ಹಣಕಾಸು ಪ್ರಕರಣದಲ್ಲಿ ಜೈಲು ಸೇರಿದ್ದ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರು ಮಂಗಳವಾರದಂದು ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿಗೆ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ನಂತರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬುಧವಾರ ಬಿಡುಗಡೆಗೊಂಡಿದ್ದಾರೆ.

- Advertisement -

ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕನನ್ನು ಬಿಡುಗಡೆ ಮಾಡಲಾಯಿತು.

ಮೊದಲ ಬಾರಿಗೆ ಹಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ನವೆಂಬರ್ 2021 ರಲ್ಲಿ ಬಂಧಿಸಿತು. ಡಿಸೆಂಬರ್ 12ರಂದು ದೇಶಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು., ಆದರೆ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಮಯ ಕೋರಿದ್ದರಿಂದ ನ್ಯಾಯಾಧೀಶರು ಆದೇಶವನ್ನು 10 ದಿನಗಳವರೆಗೆ ಕಾಯ್ದಿರಿಸಿದ್ದರು. ಏಜೆನ್ಸಿಯು ಉನ್ನತ ನ್ಯಾಯಾಲಯಕ್ಕೆ ಹೋಗಿದೆ. ಆದರೆ ಚಳಿಗಾಲದ ರಜೆಯ ನಂತರವಷ್ಟೇ ನ್ಯಾಯಾಲಯವು ಸಿಬಿಐ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ

Join Whatsapp