ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನ

Prasthutha|

ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನರಾಗಿದ್ದಾರೆ. ತಮ್ಮ 71 ನೇ ವಯಸ್ಸಿನಲ್ಲಿ ರಕ್ತದ ಕ್ಯಾನ್ಸರ್ನಿಂದ ದೀರ್ಘಕಾಲದ ಹೋರಾಟದ ನಂತರ ಅವರು ಕೊನೆಯುಸಿರೆಳೆದಿದ್ದಾರೆ.

- Advertisement -

12 ವರ್ಷಗಳ ವೃತ್ತಿಜೀವನದಲ್ಲಿ ಅವರು, 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2 ಶತಕ ಮತ್ತು 1154 ರನ್ ಗಳಿಸಿದ್ದಾರೆ. 1983 ರಲ್ಲಿ ಜಲಂಧರ್ನಲ್ಲಿ ಪಾಕಿಸ್ತಾನ ವಿರುದ್ಧ 201 ರನ್ ಗಳಿಸಿದ್ದರು.

ಇತ್ತೀಚೆಗೆ ಬಿಸಿಸಿಐ ವತಿಯಿಂದ ಗಾಯಕ್ವಾಡ್ ಅವರಿಗೆ ಸಹಾಯ ಮಾಡಲು 1 ಕೋಟಿ ರೂ. ಸಹಾಯ ನೀಡಲಾಗಿತ್ತು.

- Advertisement -

ಕಪಿಲ್ ದೇವ್, ಮಾಜಿ ಕ್ರಿಕೆಟ್ ದಂತಕಥೆಗಳಾದ ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕಾರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಸಹೋದ್ಯೋಗಿ ಗಾಯಕ್ವಾಡ್‌ಗಾಗಿ ನಿಧಿ ಸಂಗ್ರಹಿಸುತ್ತಿದ್ದರು. ಬಿಸಿಸಿಐ ಧನ ಸಹಾಯ ನೀಡದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬಳಿಕ ಬಿಸಿಸಿಐ ಒಂದು ಕೋಟಿ ರೂ. ನೀಡಿತ್ತು.



Join Whatsapp