ಮಾಜಿ ಐಸಿಸಿ ಅಂಪಾಯರ್ ಅಸದ್ ರೌಫ್ ನಿಧನ

Prasthutha|

ಇಸ್ಲಾಮಾಬಾದ್: ಮಾಜಿ ಐಸಿಸಿ ಅಂಪಾಯರ್, ಪಾಕಿಸ್ತಾನ ಮೂಲದ ಅಸದ್ ರೌಫ್ ಗುರುವಾರ ಹೃದಯಾಘಾತದಿಂದಾಗಿ ಮೃತಪಟ್ಟಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.

- Advertisement -

66 ವಯಸ್ಸಿನ ಅಸದ್ ರೌಫ್, ನಿವೃತ್ತಿ ಹೊಂದಿದ ಬಳಿಕ ಪಾಕಿಸ್ತಾನದ ಲಾಂಡಾ ಬಝಾನ್ ನಲ್ಲಿ ಬಟ್ಟೆ ಮತ್ತು ಚಪ್ಪಲಿ ಅಂಗಡಿಯನ್ನು ನಡೆಸುತ್ತಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು.

ಲಾಹೋರ್ನ ಲಾಂಡಾ ಬಜಾರ್ ನಲ್ಲಿ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ  ಚಿಕಿತ್ಸೆ ಫಲಿಸದೇ ಅವರು ನಿಧನರಾದರು” ಎಂದು ರೌಫ್ ಅವರ ಸಹೋದರ ತಾಹಿರ್ ಪಾಕಿಸ್ತಾನದ ‘ದುನ್ಯಾ ನ್ಯೂಸ್’ ಗೆ ಮಾಹಿತಿ ನೀಡಿದ್ದಾರೆ.

- Advertisement -

ಅಸದ್ ರೌಫ್ ಅವರು ಅಲೀಂ ದಾರ್ ಅವರಂತಹ ಅಂಪಾಯರ್ ಗಳೊಂದಿಗೆ ಪಾಕಿಸ್ತಾನದ ಎಲೈಟ್ ಅಂಪಾಯರ್ ಗಳಲ್ಲಿ ಒಬ್ಬರಾಗಿದ್ದರು. 2006ರಲ್ಲಿ ಅಸದ್ ರೌಫ್ ಅವರನ್ನು ಐಸಿಸಿಯ ಎಲೈಟ್ ಪ್ಯಾನೆಲ್ ಆಫ್ ಅಂಪಾಯರ್ ಆಗಿ ಸೇರಿಸಲಾಗಿತ್ತು. ಆ ನಂತರ ಅವರು 47 ಟೆಸ್ಟ್, 98 ಏಕದಿನ ಪಂದ್ಯಗಳು ಮತ್ತು 23 ಟಿ20 ಪಂದ್ಯಗಳಲ್ಲಿ ಅಂಪಾಯರ್ ಆಗಿ ಕಾರ್ಯನಿರ್ವಹಿಸಿದ್ದರು.



Join Whatsapp