ಈಜಿಫ್ಟ್ ಮಾಜಿ ಪ್ರಧಾನಿ ಷರೀಫ್ ಇಸ್ಮಾಯಿಲ್ ನಿಧನ

Prasthutha|

ಕೈರೋ: ಈಜಿಫ್ಟ್ ನ ಮಾಜಿ ಪ್ರಧಾನಿ 67 ವರ್ಷದ ಷರೀಫ್ ಇಸ್ಮಾಯಿಲ್ ನಿಧನರಾಗಿದ್ದಾರೆ ಎಂದು ಈಜಿಪ್ಟ್ ನ ಅಧಿಕೃತ ಸುದ್ದಿ ಸಂಸ್ಥೆ ಮೆನಾ(MENA) ವರದಿ ಮಾಡಿದೆ.
ಇಸ್ಮಾಯಿಲ್ ಅವರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಾಯಿಲೆಯಿಂದ ಬಳಲುತ್ತಿದ್ದರು.

- Advertisement -


ಇಸ್ಮಾಯಿಲ್ 2015- 2018 ರ ಅವಧಿಯಲ್ಲಿ ಈಜಿಫ್ತಿನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2013 ರಿಂದ 2015ರವರೆಗೆ ಪೆಟ್ರೋಲಿಯಂ ಮತ್ತು ಖನಿಜ ಸಂಪನ್ಮೂಲಗಳ ಸಚಿವರಾಗಿದ್ದರು.
ಷರೀಫ್ ಇಸ್ಮಾಯಿಲ್ ನಿಧನಕ್ಕೆ ಈಜಿಫ್ಟ್ ಅಧ್ಯಕ್ಷ ಅಬ್ದುಲ್-ಫತಾಹ್ ಅಲ್-ಸಿಸಿ, ಪ್ರಧಾನಿ ಮುಸ್ತಫಾ ಮಡ್ಬೌಲಿ ಹಾಗೂ ಇತರ ಈಜಿಪ್ಟ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.


“ಇಸ್ಮಾಯಿಲ್ ನಿಜವಾಗಿಯೂ ಮಹಾನ್ ವ್ಯಕ್ತಿಯಾಗಿದ್ದರು. ಅವರು ಅತ್ಯಂತ ಕಷ್ಟದ ಸಮಯ ಮತ್ತು ವಿಷಮ ಪರಿಸ್ಥಿತಿಗಳಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದು, ಅವರು ಅದಕ್ಕೆ ಬದ್ಧರಾಗಿದ್ದರು. ನಾನು ಅವರನ್ನು ನಿಸ್ವಾರ್ಥ, ವಿಶ್ವಾಸಾರ್ಹ ವ್ಯಕ್ತಿಯಾಗಿ ಕಂಡಿದ್ದೇನೆ. ವೈಯಕ್ತಿಕ ಲಾಭಗಳಿಗಿಂತ ತಮ್ಮ ದೇಶ ಮತ್ತು ಜನರ ಹಿತಾಸಕ್ತಿಗಳನ್ನು ಅವರು ಎತ್ತಿ ಹಿಡಿದಿದ್ದಾರೆ” ಎಂದು ಅಧ್ಯಕ್ಷ ಅಲ್-ಸಿಸಿ ಹೇಳಿದ್ದಾರೆ.

Join Whatsapp