ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯರವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಅರಸಿ ಬಂದಿದೆ. ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಪ್ರತಿ ವರ್ಷ ನೀಡುವ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ಈ ಬಾರಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಕ್ಷದ ಸಂಸದರಾದ ತಿರುಮಾವಲವನ್ ಅವರು ಇಂದು ನನ್ನನ್ನು ಭೇಟಿ ನೀಡಿ ಪ್ರಶಸ್ತಿ ಸ್ವೀಕರಿಸಲು ಜುಲೈ 30ರಂದು ಚೆನ್ನೈಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ, ಈ ಆಯ್ಕೆಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

- Advertisement -

ವಿಡುದಲೈ ಚಿರುದೈಗಳ್ ಪಕ್ಷವು (ಲಿಬರೇಶನ್ ಪ್ಯಾಂಥರ್ ಪಾರ್ಟಿ) ದಲಿತ ಪ್ಯಾಂಥರ್ಸ್ ಚಳವಳಿಯಿಂದ ಹುಟ್ಟಿಕೊಂಡ, ಭಾರತದಲ್ಲಿನ ಅಸಮಾನತೆ ವಿರುದ್ಧ ಹೋರಾಡುತ್ತಿರುವ ಪಕ್ಷ . ಜಾತಿ ಆಧಾರಿತ ತಾರತಮ್ಯದ ವಿರುದ್ಧ ತಮಿಳುನಾಡಿನಲ್ಲಿ  ಸಕ್ರಿಯವಾಗಿದೆ.

1970ರಲ್ಲಿ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ದಲಿತ್ ಪ್ಯಾಂಥರ್ಸ್ ಆಫ್ ಇಂಡಿಯಾದಿಂದ ಪ್ರೇರೇಪಣೆಯಾಗಿ 1982ರಲ್ಲಿ ತಮಿಳುನಾಡಿನ ಮಧುರೈನಲ್ಲಿ ದಲಿತ ಪ್ಯಾಂಥರ್ಸ್ ರಚನೆಯಾಯಿತು. 1999 ರಲ್ಲಿ ವಿಸಿಕೆ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿತು. ಅಂದಿನಿಂದ ಎರಡು ದಶಕಗಳಲ್ಲಿ, ಪಕ್ಷವು ಹಲವಾರು ಏರಿಳಿತಗಳನ್ನು ಎದುರಿಸಿದೆ. ಇಬ್ಬರು ಸಂಸದರು ಮತ್ತು ನಾಲ್ವರು ಶಾಸಕರನ್ನು ಹೊಂದಿದೆ.

Join Whatsapp