ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ Z ಕೆಟಗರಿ ಭದ್ರತೆ

Prasthutha|

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೃಹ ವ್ಯವಹಾರಗಳ ಸಚಿವಾಲಯ ಝಡ್ ಕೆಟಗರಿ ಭದ್ರತೆಯನ್ನು ನೀಡಿದೆ.

- Advertisement -

ರಾಜ್ಯದ ಒಳಗೆ ಯಡಿಯೂರಪ್ಪನವರಿಗೆ Z ವರ್ಗದ ಭದ್ರತೆ ಒದಗಿಸಿದ್ದು, ಸದ್ಯದಲ್ಲೇ ಸಿಆರ್ಪಿಎಫ್ ಸಿಬ್ಬಂದಿಯಿಂದ ಭದ್ರತೆ ಕ್ರಮ ಒದಗಿಸಲಾಗುತ್ತದೆ. ಎಲ್ಲಾ ಮಾಜಿ ಸಿಎಂಗಳ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆ ವಾಪಸ್ ಪಡೆದಿತ್ತು. ಇದರಿಂದ ಸರ್ಕಾರಕ್ಕೆ ಭದ್ರತೆ ವಾಪಸ್ ಕೊಡುವಂತೆ ಯಡಿಯೂರಪ್ಪ, ಡಿವಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಪತ್ರ ಬರೆದಿದ್ದರು. ಇದೀಗ ಯಡಿಯೂರಪ್ಪನವರಿಗೆ Z ಕೆಟಗರಿಯ ಭದ್ರತೆ ಕೊಡಲಾಗಿದೆ.



Join Whatsapp