ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ ನಿಧನ

Prasthutha|

ಮುಂಬೈ: ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

- Advertisement -


ಸೂರತ್’ನಲ್ಲಿ ಜನಿಸಿದ್ದ ನ್ಯಾಯಮೂರ್ತಿ ಅಹ್ಮದಿ ಅವರು 1954 ರಲ್ಲಿ ಬಾಂಬೆಯಲ್ಲಿ ಕಾನೂನು ವೃತ್ತಿ ಜೀವನಕ್ಕೆ ಕಾಲಿಟ್ಟರು. ಹತ್ತು ವರ್ಷಗಳ ನಂತರ ಅಹ್ಮದಾಬಾದ್’ನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1976ರಲ್ಲಿ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
ಅವರು 1989 ರಲ್ಲಿ ಸುಪ್ರೀಂ ಕೋರ್ಟ್ ಕಾನೂನು ನೆರವು ಸಮಿತಿಯ ಅಧ್ಯಕ್ಷರಾಗಿ ಮತ್ತು 1990 ಮತ್ತು 1994 ರ ನಡುವೆ ಭಾರತದಲ್ಲಿ ಕಾನೂನು ನೆರವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.


ನ್ಯಾಯಮೂರ್ತಿ ಅಹ್ಮದಿ ಅವರು ಅಕ್ಟೋಬರ್ 25, 1994 ರಿಂದ ಮಾರ್ಚ್ 24, 1997 ರಂದು ನಿವೃತ್ತರಾಗುವವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.
ನ್ಯಾಯಮೂರ್ತಿ ಅಹ್ಮದಿ ಅವರು ಸುಪ್ರೀಂ ಕೋರ್ಟ್’ನಲ್ಲಿದ್ದಾಗ 232 ತೀರ್ಪುಗಳನ್ನು ಬರೆದಿದ್ದಾರೆ ಮತ್ತು 811 ನ್ಯಾಯಪೀಠಗಳ ಭಾಗವಾಗಿದ್ದರು.



Join Whatsapp