ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ಬಿಜೆಪಿ ನಾಯಕ; ಕಂಗಾಲಾದ ಕುಟುಂಬ

Prasthutha|

ಆಗ್ರಾ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ವೈದ್ಯರು ಹೇಳಿದ ಬೆನ್ನಲ್ಲೇ ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದ ವೇಳೆ ಮೃತ ವ್ಯಕ್ತಿ ಕಣ್ಣು ಬಿಟ್ಟ ವಿಚಿತ್ರ ಘಟನೆಯೊಂದು ಆಗ್ರಾದಲ್ಲಿ ನಡೆದಿದೆ.

- Advertisement -

ಆಗ್ರಾದ ಬಿಜೆಪಿ ಮಾಜಿ ಅಧ್ಯಕ್ಷ ಮಹೇಶ್ ಬಾಘೇಲ್ (65) ಅವರೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಹೇಳಲಾದ ವ್ಯಕ್ತಿ.

ಮಾಜಿ ಬಿಜೆಪಿ ನಾಯಕ ಮಹೇಶ್ ಬಾಘೇಲ್ ಅವರ ಆರೋಗ್ಯವು ಉತ್ತರ ಪ್ರದೇಶದ ಅವರ ಮನೆಯಲ್ಲಿ ಹದಗೆಟ್ಟಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷೆ ನಡೆಸಿದ ವೇಳೆ ಬಾಘೇಲ್ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

- Advertisement -

ವೈದ್ಯರ ಹೇಳಿಕೆ ಮೇರೆಗೆ ಬಾಘೇಲ್ ಮೃತದೇಹವನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದ ವೇಳೆ ಬಾಘೇಲ್ ಅವರು ಕಣ್ಣು ಬಿಟ್ಟಿದ್ದಾರೆ. ಇದನ್ನು ಕಂಡ ಅಲ್ಲಿದ್ದ ಕುಟುಂಬ ವರ್ಗಕ್ಕೆ ಆಶ್ಚರ್ಯವೂ ಆಗಿದೆ ಜೊತೆಗೆ ಇದು ನಿಜಾನಾ ಎಂಬ ಭಾವನೆ ಅವರಲ್ಲಿ ಮೂಡಿದೆ.

ಬಳಿಕ ಮತ್ತೆ ಬಾಘೇಲ್ ಅವರನ್ನು ಆಗ್ರಾದ ಬೇರೊಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಧ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Join Whatsapp