ಪಣಜಿ: ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ಬಿಜೆಪಿಯ ಅಟಾನಾಸಿಯೊ ಮಾನ್ಸರೇಟ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ..
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಸರೇಟ್ ಅವರು ತಮ್ಮ ಗೆಲುವಿನ ಅಂತರದಿಂದ ಸಂತೋಷವಾಗಿಲ್ಲ ಮತ್ತು ಬಿಜೆಪಿ ಬೆಂಬಲಿಗರು ತನಗೆ ಮತ ಹಾಕಲಿಲ್ಲ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಘಟಕ ಜನರಿಗೆ ಸರಿಯಾದ ಸಂದೇಶ ರವಾನಿಸಿಲ್ಲ, ಬಿಜೆಪಿಯ ಎಲ್ಲ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಬಿಜೆಪಿ ಜತೆಗಿದ್ದೇನೆ ಎಂದು ಹೇಳಿದರು.