ಜೈಲಿನಿಂದ ಹೊರಬಂದ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು

Prasthutha|

- Advertisement -

ರಾಜಮಹೇಂದ್ರವರಂ: ಆಂಧ್ರ ಪ್ರದೇಶದ ಕೌಶಲ್ಯ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಜೈಲು ಸೇರಿದ್ದ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಿಡುಗಡೆಯಾಗಿದ್ದಾರೆ. ಹೈಕೋರ್ಟ್ ನಿಂದ ತಾತ್ಕಾಲಿಕ ಜಾಮೀನು ಪಡೆದು ಅವರು ಇಲ್ಲಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು.

53 ದಿನಗಳ ಜೈಲುವಾಸ ಮುಗಿಸಿ ಸಂಜೆ 4-20ಕ್ಕೆ ಜೈಲಿನಿಂದ ಹೊರ ಬಂದ ಅವರನ್ನು ಕುಟುಂಬಸ್ಥರು, ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತಿಸಿದರು. ಜೈಲಿನ ಹೊರಗೆ ಸೇರಿದ್ದ ಸಾವಿರಾರು ಕಾರ್ಯಕರ್ತರು, ಟಿಡಿಪಿ ಧ್ವಜ ಹಾರಿಸುವ ಮೂಲಕ ತಮ್ಮ ನಾಯಕರಿಗೆ ಅದ್ದೂರಿ ಸ್ವಾಗತ ಕೋರಿದರು.

- Advertisement -

ಇಂದು ಬೆಳಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್ ಅವರಿಗೆ ಅನಾರೋಗ್ಯ ನಿಮಿತ್ತ ನಾಲ್ಕು ವಾರಗಳ ಜಾಮೀನು ಮಂಜೂರು ಮಾಡಿದ್ದು, ನವೆಂಬರ್ 28ರೊಳಗಾಗಿ ರಾಜಮಹೇಂದ್ರವರಂ ಜೈಲು ವರಿಷ್ಠಾಧಿಕಾರಿ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.



Join Whatsapp