ಸಾಮೂಹಿಕ ಅತ್ಯಾಚಾರ ಪ್ರಕರಣ: ಅಂಡಮಾನ್ ನಿಕೋಬಾರ್  ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ

Prasthutha|

ಪೋರ್ಟ್ ಬ್ಲೇರ್ : ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಅಂಡಮಾನ್ ಮತ್ತು ನಿಕೋಬಾರ್ ನ ಮಾಜಿ ಮುಖ್ಯ ಕಾರ್ಯದರ್ಶಿ ಜೀತೇಂದ್ರ ನಾರಾಯಣ್ ರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

- Advertisement -

21 ವರ್ಷದ ಯುವತಿ ನೀಡಿದ ಸಾಮೂಹಿಕ ಅತ್ಯಾಚಾರದ ದೂರಿನ ಹಿನ್ನೆಲೆಯಲ್ಲಿ ನಾರಾಯಣ್ ಮತ್ತು ಇತರರ ವಿರುದ್ಧ  ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನಾರಾಯಣ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.

ನಾರಾಯಣ್ ತಂಗಿರುವ ಖಾಸಗಿ ರೆಸಾರ್ಟ್ ಗೆ ತೆರಳಿದ  ಪೊಲೀಸರ ತಂಡ ಭಾರಿ ಭದ್ರತೆಯ ನಡುವೆ ಬಂಧಿಸಿ ಕರೆದೊಯ್ಯಿಯ್ದಿದ್ದು,  ನಂತರ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ್, ನನ್ನ ಮೇಲಿನ ಆರೋಪ ಸುಳ್ಳು. ಇದೊಂದು ಪಿತೂರಿ ಎಂಬುವುದು ನಿಮಗೂ ತಿಳಿದಿದೆ. ಎಲ್ಲದರ ಬಗ್ಗೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

- Advertisement -

ಪೋರ್ಟ್ ಬ್ಲೇರ್ ನಲ್ಲಿ 21 ವರ್ಷದ ಮಹಿಳೆಯೊಬ್ಬರು ನಾರಾಯಣ್ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಅಕ್ಟೋಬರ್ 1 ರಂದು ಪೋರ್ಟ್ ಬ್ಲೇರ್ ನ ಅಬರ್ಡೀನ್ ಪೊಲೀಸ್ ಠಾಣೆಯಲ್ಲಿ ಅಂಡಮಾನ್ ಮತ್ತು  ನಿಕೋಬಾರ್ ದ್ವೀಪಗಳ ಕಾರ್ಮಿಕ ಕಮಿಷನರ್ ಆಗಿ ನಿಯೋಜಿಸಲಾದ ನಾರಾಯಣ್ ಮತ್ತು ಲೆಫ್ಟಿನೆಂಟ್ ಜನರಲ್ ರಿಷಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಆರೋಪದ ಬಗ್ಗೆ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡ (ಎಸ್ಐಟಿ) ವನ್ನು ರಚಿಸಿದ್ದಾರೆ .

Join Whatsapp