ನಾಲ್ಕು ಕಾರ್ ಮತ್ತು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಕೊಂಡು ದೇಶ ತೊರೆದ ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ!

Prasthutha|

ಕಾಬೂಲ್: ನಾಲ್ಕು ಕಾರ್ ಹಾಗೂ ಹೆಲಿಕಾಪ್ಟರ್ ತುಂಬಾ ಹಣದೊಂದಿಗೆ ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ರಾಜಧಾನಿ ಕಾಬೂಲ್​ ನ್ನು ತೊರೆದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಕಾರ್ ​ಗಳಲ್ಲಿ ಕೂಡ ಹಣ ತುಂಬಲಾಗಿತ್ತು. ಮತ್ತೊಂದಷ್ಟು ಹಣವನ್ನು ಅವರು ಹೆಲಿಕಾಪ್ಟರ್​ ನಲ್ಲಿ ಕೂಡ ತುಂಬಿದ್ದರು. ಆದರೂ ಸಂಪೂರ್ಣ ಹಣ ತುಂಬಿಸಿಕೊಳ್ಳಲು ಆಗಲಿಲ್ಲ,  ಒಂದಷ್ಟು ಮಿಕ್ಕ ಹಣ ಅಲ್ಲೇ ಉಳಿಸಿ ಹೋಗಿದ್ದಾರೆ ಎಂದು ಕಾಬೂಲ್​ ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರ ನಿಕಿತ ಇಚೆಂಕೊ ಹೇಳಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.

ಅಫ್ಘಾನಿಸ್ತಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಸದ್ಯ ಎಲ್ಲಿದ್ದಾರೆ ಎಂದು ನಿಖರ ಮಾಹಿತಿ ಲಭ್ಯವಾಗಿಲ್ಲ.  ಅಫ್ಘಾನಿಸ್ತಾನ ಬಿಟ್ಟು ತೆರಳುವ ಮುನ್ನ ಸುದೀರ್ಘ ಫೇಸ್​ ಬುಕ್ ಪೋಸ್ಟ್ ಮಾಡಿದ್ದ ಅಶ್ರಫ್ ಘನಿ, ತಾನು ಆಗಬಹುದಾದ ರಕ್ತಪಾತವನ್ನು ತಡೆಯುವುದಕ್ಕಾಗಿ ದೇಶ ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದರು.



Join Whatsapp