ಟಿಕೆಟ್ ನಿರಾಕರಣೆ: ಟವರ್ ಏರಿ ಪ್ರತಿಭಟನೆ ನಡೆಸಿದ ಎಎಪಿ ಮಾಜಿ ಕೌನ್ಸಿಲರ್

Prasthutha|

ನವದೆಹಲಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವುದಕ್ಕೆ ಬೇಸರಗೊಂಡ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

- Advertisement -

ಎಎಪಿಯ ಮಾಜಿ ಕೌನ್ಸಿಲರ್ ಹಸೀಬ್ ಉಲ್ ಹಸನ್ ಅವರಿಗೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ  ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡ ಹಸೀಬ್, ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ವಿದ್ಯುತ್ ಟ್ರಾನ್ಸ್ಮಿಷನ್ ಟವರ್ ಏರಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕರು ₹2ರಿಂದ ₹3 ಕೋಟಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಚುನಾವಣೆ ಸಂಬಂಧ ನನ್ನ ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಮೂಲ ದಾಖಲೆಗಳನ್ನು ಪಕ್ಷದ ನಾಯಕರಾದ ಅತಿಶಿ, ದುರ್ಗೇಶ್ ಪಾಠಕ್ ಮತ್ತು ಸಂಜಯ್ ಸಿಂಗ್ ಅವರ ಪಡೆದುಕೊಂಡಿದ್ದು ಹಿಂದಿರುಗಿಸಿಲ್ಲ.  ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ನನಗೇನಾದರೂ ಸಂಭವಿಸಿದರೆ ಅದಕ್ಕೆ ದುರ್ಗೇಶ್ ಪಾಠಕ್ ಮತ್ತು ಅತಿಶಿ ಅವರೇ ಜವಾಬ್ದಾರರು ಎಂದು ಹೇಳಿದ್ದಾರೆ.

- Advertisement -

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಸೀಬ್ ಅವರನ್ನು ಮನವೊಲಿಸಿ ಟವರ್ ಮೇಲಿಂದ ಕೆಳಗಿಳಿಸಿದ್ದಾರೆ.

Join Whatsapp