ಕಸಬಾ ಬೆಂಗರೆ ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ (ರಿ) ಇದರ ಅಧೀನದಲ್ಲಿ ಸಮಿತಿ ರಚನೆ

Prasthutha|

ಮಂಗಳೂರು: ಬೆಂಗರೆ ನಾಗರಿಕ ಹಿತರಕ್ಷಣಾ ಸಮಿತಿ ಹೆಸರಿನಿಂದ ಕಸಬಾ ಬೆಂಗರೆ ಅಲ್ ಮದ್ರಸತುಲ್ ದೀನಿಯ್ಯ ಅಸೋಸಿಯೇಷನ್ (ರಿ) ಇದರ ಅಧೀನದಲ್ಲಿ ಒಂದು ಸಮಿತಿ ರಚಿಸಲಾಗಿದೆ.

- Advertisement -

ನಾಗರಿಕ ಹಿತರಕ್ಷಣಾ ಸಮಿತಿಯು ಬೆಂಗರೆಯ ಊರಿನ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಚನೆ ಮಾಡಿನ ಸಮಿತಿಯಾಗಿದ್ದು, ಈ ಸಮಿತಿಯಲ್ಲಿ ಕಸಬಾ ಬೆಂಗರೆ ಪರಿಸರದ ರಾಜಕೀಯ , ಸಾಮಾಜಿಕ ಹಾಗೂ ಧಾರ್ಮಿಕ ಮತ್ತು ಉತ್ತಮ ಕ್ರೀಡಾಪಟುಗಳನ್ನು ಒಳಗೊಂಡ ಸಮಿತಿಯಾಗಿದೆ.

ಭಾರತ ದೇಶ ಸೇರಿದಂತೆ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲಗಳು ಕಾರ್ಯಾಚರಣೆ ನಡೆಸುತ್ತಿದ್ದು  ಅದು ನಮ್ಮ ಬೆಂಗರೆ ಪರಿಸರಕ್ಕೂ ಲಗ್ಗೆ ಇಟ್ಟಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ ರಾಜ್ಯ ಸರಕಾರದ ಘನ ಗೃಹಮಂತ್ರಿಗಳು  ಡ್ರಗ್ ಮಾಫಿಯಾ ಹಾಗೂ ಮಾರಾಟಗಳನ್ನು ತಡೆಗಟ್ಟುವ ಉದ್ದೇಶದಿಂದ ಒಂದು ಉತ್ತಮ ಹೆಜ್ಜೆಯನ್ನು ಇಟ್ಟಿರುವುದು ನಮಗೆಲ್ಲ ಸಂತೋಷದ ವಿಷಯವಾಗಿದೆ.

- Advertisement -

ಈ ನಿಟ್ಟಿನಲ್ಲಿ ನಮ್ಮ ಬೆಂಗರೆ ಗ್ರಾಮವನ್ನು ಮಾದಕ ದ್ರವ್ಯ ಮುಕ್ತ ಉತ್ತಮ ಸಮಾಜಕ್ಕೆ ಬೆಂಗರೆ ಕಸಬಾ ಜಮಾಅತ್ ಕಮಿಟಿ ಪಣತೊಟ್ಟು ನಿಂತಿರುವುದಲ್ಲದೇ ಇದಕ್ಕೆ ಒಂದು ಸಮಿತಿಯನ್ನು ರಚನೆ ಮಾಡಿ ಊರಿನ ನಾಗರಿಕ ಸಮಾಜವನ್ನು ಜನಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು ಈ ಕುರಿತು ದಿನಾಂಕ 18-08-2023 ರಂದು ಕಸಬಾ ಬೆಂಗರೆ ಕಡವಿನ ಬಳಿ ಇರುವ ನಮ್ಮ ಮುಹಿಯುದ್ದೀನ್ ಜುಮಾ ಮಸೀದಿಯ ಮುಂಭಾಗದಲ್ಲಿ ಮಂಗಳೂರು ಮಹಾನಗರ ಪೋಲಿಸ್ ಆಯುಕ್ತರ ಉಪಸ್ಥಿತಿಯಲ್ಲಿ ನೇರ ಸಂವಾದ ಪೋಲಿಸ್ ಜನ ಸಂಪರ್ಕ ಸಭೆ ನಡೆಯಲಿದೆ. ಸದ್ರಿ ವಿಚಾರವನ್ನು ಪತ್ರಿಕೆಯಲ್ಲಿ ಪ್ರಕಟಿಸಿ ನಮ್ಮ ಊರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಬಿಲಾಲ್ ಮೊಯ್ದೀನ್ , ಕಾರ್ಪೋರೇಟರ್ ಮುನೀಬ್ ಬೆಂಗ್ರೆ , ಬೆಂಗರೆ ನಾಗರಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷರಾದ ಬಿ.ಎ ಇಬ್ರಾಹಿಂ , ಜೊತೆ ಕಾರ್ಯದರ್ಶಿ ನದೀಮ್ ಸಾಹೆಬ್ , ಮುಹಮ್ಮದ್ ಶರೀಫ್ ದಾರಿಮಿ ಯವರು ಉಪಸ್ಥಿತರಿದ್ದರು.

Join Whatsapp