ಅರಣ್ಯಾಧಿಕಾರಿ ಸಂಧ್ಯಾ ವರ್ಗಾವಣೆ ಆದೇಶಕ್ಕೆ ತಡೆ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಮುಖಭಂಗ

Prasthutha|

ಬೆಳ್ತಂಗಡಿ: ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯನ್ನು ಬೀದರ್‌ ಗೆ ವರ್ಗಾಯಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಮುಖಭಂಗವಾಗಿದೆ. ವರ್ಗಾವಣೆ ಆದೇಶಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಪೀಠ ತಡೆ ನೀಡಿದೆ.

- Advertisement -

ಅರಣ್ಯ ಸಂಚಾರಿ ದಳದ ಅಧಿಕಾರಿಯಾಗಿದ್ದ ಮಹಿಳಾ ಅಧಿಕಾರಿ ಸಂಧ್ಯಾ ಸಚಿನ್ ಅವರನ್ನು ವರ್ಗಾವಣೆ ಮಾಡಿಸಿದಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಸಂಧ್ಯಾ ಅವರು ಮೊದಲಿದ್ದ ಹುದ್ದೆಯಲ್ಲೇ ಮರು ನೇಮಕಗೊಳಿಸಿ ಆದೇಶಿಸಿದೆ.

ಸರ್ಕಾರದ ಆದೇಶದ ವಿರುದ್ಧ ಅಧಿಕಾರಿ ಸಂಧ್ಯಾ ಸಚಿನ್ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಇದು ರಾಜಕೀಯ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ, ವರ್ಗಾವಣೆ ಮಾಡಬೇಕಾದರೇ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಕೋರ್ಟ್  ಹೇಳಿದೆ.

- Advertisement -

Join Whatsapp