ಕೊಡಗು : ಹುಲಿ ಸೆರೆಹಿಡಿಯಲು ಅರಣ್ಯ ಇಲಾಖೆಗೆ ಅನುಮತಿ

Prasthutha|

ಮಡಿಕೇರಿ: ಕಳೆದ ಹಲವು ವಾರಗಳಿಂದ ದಕ್ಷಿಣ ಕೊಡಗು ಭಾಗದಲ್ಲಿ ಹಾವಳಿ ಎಬ್ಬಿಸಿ ಜನರ ನಿದ್ದೆಗೆಡಿಸಿದ್ದ ಹೆಣ್ಣು ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಅನುಮತಿ ನೀಡಲಾಗಿದೆ.

- Advertisement -

ಇದುವರೆಗೂ 5 ಜಾನುವಾರುಗಳನ್ನು ಹೆಣ್ಣು ಹುಲಿ ಬಲಿಪಡೆದಿದೆ. ಹುಡಿಕೇರಿ, ಬೆಳ್ಳೂರು, ತುಚಮಕೇರಿ ಗ್ರಾಮಗಳ ಜನರು ಹೆಣ್ಣು ಹುಲಿಯಿಂದಾಗಿ ಆತಂಕಗೊಂಡು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದರು.  ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ನಂತರ ಹೆಣ್ಣು ಹುಲಿಯ ಚಲನವಲನವನ್ನು ತಿಳಿದುಕೊಳ್ಳಲು 30 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಸಿಸಿಟಿವಿ ಕ್ಯಾಮೆರಾದಲ್ಲಿ ಹೆಣ್ಣು ಹುಲಿ ಕಾಣಿಸಿಕೊಂಡಿದ್ದು, ಆ ಹುಲಿಯ ಗುರುತನ್ನು ಪತ್ತೆ ಹಚ್ಚಲಾಗಿದೆ. ಹುಲಿಯ ಹೆಸರು ನಾಗರಹೊಳೆ-20-ಯು44 ಎಂದು ತಿಳಿದು ಬಂದಿದೆ. ಹುಲಿಯ ಕಣ್ಣಿಗೆ ಗಾಯವಾಗಿದ್ದು ಅದರಿಂದಾಗಿಯೇ ಬೇಟೆಯಾಡುವ ಸಾಮರ್ಥ್ಯ ಕುಂಠಿತಗೊಂಡಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ 50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.



Join Whatsapp