‘ಹಥ್ರಾಸ್ ಸಂತ್ರಸ್ತೆಯ ಅತ್ಯಾಚಾರ ನಿರಾಕರಿಸುವ ಫೊರೆನ್ಸಿಕ್ ವರದಿ ನಂಬಲರ್ಹವಲ್ಲ’

Prasthutha|

ಲಕ್ನೊ: ಹಥ್ರಾಸ್ ಸಂತ್ರಸ್ತೆಯ ಅತ್ಯಾಚಾರ ನಡೆದಿಲ್ಲ ಎಂದು ಹೇಳಲು ಯುಪಿ ಸರಕಾರ ಆಧರಿಸಿಕೊಂಡಿರುವ ವಿಧಿವಿಜ್ನಾನ ಪ್ರಯೋಗಾಲಯದ (ಎಫ್.ಎಸ್.ಎಲ್) ವರದಿಯು ಮೌಲ್ಯಯುತವಲ್ಲ ಎಂದು ಅಲಿಘಡ ಮುಸ್ಲಿಮ್ ಯುನಿವರ್ಸಿಟಿ (ಎ.ಎಂ.ಯು)ಯ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನ   ಮುಖ್ಯಸ್ಥರು ಹೇಳಿದ್ದಾರೆ.

ಹಥ್ರಾಸ್ ಸಂತ್ರಸ್ತೆ ಎರಡುವಾರಗಳ ಕಾಲ ಈ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಳು.

- Advertisement -

“ಮಹಿಳೆಯು ಅತ್ಯಾಚಾರಕ್ಕೊಳಗಾದ 11 ದಿನಗಳ ಬಳಿಕವಷ್ಟೆ ಮಾದರಿಯನ್ನು ಸಂಗ್ರಹಿಸಲಾಗಿದೆ. ಘಟನೆಯ 96 ಗಂಟೆಗೊಳಗಾಗಿ ಮಾತ್ರವೇ ಫೊರೆನ್ಸಿಕ್ ಸಾಕ್ಷ್ಯಗಳು ಪತ್ತೆಯಾಗಬಲ್ಲುದು ಎಂದು ಸರಕಾರದ ಮಾರ್ಗಸೂಚಿಯು ಕಟ್ಟುನಿಟ್ಟಾಗಿ ಹೇಳುತ್ತದೆ. ಹಾಗಾಗಿ ವರದಿಯು ಈ ಘಟನೆಯಲ್ಲಿ ಅತ್ಯಾಚಾರವನ್ನು ಖಾತರಿಪಡಿಸಲಾರದು” ಎಂದು ಸಿ.ಎಂ.ಒ ಡಾ.ಅಝೀಮ್ ಮಲಿಕ್ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಘಟನೆ ನಡೆದು 11 ದಿನಗಳ ಬಳಿಕ ಸೆ.25ರಂದು ವಿಧಿವಿಜ್ನಾನ ಪ್ರಯೋಗಾಲಯವು ಮಾದರಿಯನ್ನು ಪಡೆದಿತ್ತು.

- Advertisement -