ಟೀಂ ಇಂಡಿಯಾ ಜೆರ್ಸಿಯಲ್ಲಿ ಪಾಕ್ ಹೆಸರು : ಫೋಟೋ ವೈರಲ್

Prasthutha|

ಹೊಸದಿಲ್ಲಿ: ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಟೀಮ್ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಇರಲಿದೆ. ಈಗಾಗಲೇ ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಏಷ್ಯಾಕಪ್ ಮತ್ತು ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಗಳಿಗೆ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಏಕದಿನ ವಿಶ್ವಕಪ್‍ನಲ್ಲಿ ಅಕ್ಟೋಬರ್ 14ರಂದು ನಡೆಯುವ ಪಂದ್ಯಕ್ಕೂ ಮುನ್ನವೇ ಏಷ್ಯಾಕಪ್‍ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಏಷ್ಯಾಕಪ್ ಆಗಸ್ಟ್ 30ರಿಂದ ಶುರುವಾಗಲಿದ್ದು, ಸೆಪ್ಟೆಂಬರ್ 17ರವರೆಗೂ ನಡೆಯಲಿದೆ.

ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಕಾಣಿಸಿಕೊಳ್ಳಲಿದೆ. ಈಗಾಗಲೇ ಭಾರತದ ಜೆರ್ಸಿಯ ಮೇಲೆ ಪಾಕಿಸ್ತಾನದ ಹೆಸರಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸದ್ಯ ಇದೇ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಭಾರತದ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಏಕೆ ಎಂದು ಕ್ರಿಕೆಟ್ ಪ್ರಿಯರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಏಕದಿನ ವಿಶ್ವಕಪ್‍ನಲ್ಲಿ ಭಾರತದ ಹೆಸರು ಪಾಕ್ ಜೆರ್ಸಿ ಮೇಲಿರಲಿದೆ ಎಂದು ಚರ್ಚೆಯನ್ನು ಮೊಟಕುಗೊಳಿಸುತ್ತಿದ್ದಾರೆ.

- Advertisement -

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡವೇ ಆತಿಥ್ಯ ವಹಿಸುತ್ತಿದೆ. ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂಬ ಕಾರಣಕ್ಕೆ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗುತ್ತಿದೆ. ರೋಹಿತ್ ನೇತೃತ್ವದ ತಂಡದ ಎಲ್ಲಾ ಪಂದ್ಯಗಳೂ ಶ್ರೀಲಂಕಾದಲ್ಲೇ ನಡೆಯಲಿದೆ. ಪಾಕಿಸ್ತಾನವೇ ಪ್ರಾಥಮಿಕ ಅತಿಥೇಯವಾಗಿರುವುದರಿಂದ ಜೆರ್ಸಿಯಲ್ಲಿ ಪಾಕ್ ಹೆಸರು ಇರಲಿದೆ.

ಏಷ್ಯಾಕಪ್ 2023ರ ಲೋಗೋದ ಮೇಲೆ ಪಾಕಿಸ್ತಾನದ ಹೆಸರಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 2ರಂದು ಆಡಲಿದೆ.

ವಿಶ್ವಕಪ್ ಆತಿಥ್ಯವನ್ನು ಭಾರತ ವಹಿಸಲಿದ್ದು, ಏಕದಿನ ವಿಶ್ವಕಪ್‍ನಲ್ಲಿ ಪಾಕಿಸ್ತಾನ ಜೆರ್ಸಿ ಮೇಲೆ ಭಾರತದ ಹೆಸರು ಇರಲಿದೆ. ಏಕದಿನ ವಿಶ್ವಕಪ್ ಲೋಗೋ ಮೇಲೆ ಭಾರತದ ಹೆಸರು ಕಾಣಿಸಿಕೊಳ್ಳಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ಜೆರ್ಸಿಯಲ್ಲೂ ಈ ಹೆಸರು ಮಿಂಚಲಿದೆ.

Join Whatsapp