T-20 ವಿಶ್ವಕಪ್ ಟೂರ್ನಿಯಲ್ಲಿ ಅಪರೂಪದ ದಾಖಲೆ …!

Prasthutha|

ಒಮಾನ್; ಐಸಿಸಿ ಟಿ-20 ವಿಶ್ವಕಪ್’ನ ಮೊದಲ ದಿನವೇ ಬಾಂಗ್ಲಾದೇಶ ತಂಡದ ಆಲ್‌ರೌಂಡರ್‌ ಶಕಿಬ್ ಅಲ್ ಹಸನ್, ಅತೀ ಹೆಚ್ಚು ವಿಕೆಟ್ ಪಡೆದ ವಿಶ್ವ ದಾಖಲೆ ನಿರ್ಮಿಸಿದ ಮರು ದಿನವೇ ವಿಶ್ವಕಪ್ ಟೂರ್ನಿ ಮತ್ತೊಂದು ಅಪರೂಪದ ದಾಖಲೆಗೆ ವೇದಿಕೆಯಾಗಿದೆ. ಐಸಿಸಿ ಟಿ- ವಿಶ್ವಕಪ್ ಕೂಟದ ಎರಡನೇ ದಿನ ಐರ್ಲೆಂಡ್ ತಂಡದ ವೇಗಿ ಕರ್ಟಿಸ್ ಕ್ಯಾಂಫರ್, ನೆದರ್​ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್’ಗೂ ಮಿಗಿಲಾದ ಸಾಧನೆ ಮಾಡಿದ್ದಾರೆ. ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

- Advertisement -

ಆ ಮೂಲಕ ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮೊದಲು ಶ್ರೀಲಂಕಾದ ಲಸಿತ್ ಮಾಲಿಂಗ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 10ನೇ ಓವರ್ ಎಸೆದ ಕರ್ಟಿಸ್ ಕ್ಯಾಂಫರ್, ಓವರ್’ನ
ಎರಡನೇ ಎಸೆತದಲ್ಲಿ ಏಕರ್ ಮನ್’ ಕ್ಯಾಚ್ ಕೊಟ್ಟು ನಿರ್ಗಮಿಸಿದರು . ಮೂರನೇ ಎಸೆತದಲ್ಲಿ ಟೆನ್ ಡೆಷ್ಕೋಟ್’ ಹಾಗೂ ನಾಲ್ಕನೇ ಎಸೆತದಲ್ಲಿ ಬಲಗೈ ಆಟಗಾರ ಸ್ಕಾಟ್ ಎಡ್ವರ್ಡ್ಸ್’ರನ್ನು ಎಲ್ ಬಿಡಬ್ಲ್ಯೂ ಬಲೆಯಲ್ಲಿ ಕೆಡವಿದರು. ಈ ಮೂಲಕ ಕ್ಯಾಂಫರ್ ಹ್ಯಾಟ್ರಿಕ್ ಸಾಧಿಸಿದರು. ಮುಂದಿನ ಎಸೆತದಲ್ಲಿ ವಾನ್ ಡರ್ ಮರ್ವ್ ರನ್ನು ಕ್ಲೀನ್ ಬೌಲ್ಡ್ ಮಾಡಿದ ಕರ್ಟಿಸ್ ಕ್ಯಾಂಫರ್ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು. ತನ್ನ ಕೋಟಾದ 4 ಓವರ್ ಬೌಲಿಂಗ್ ಮಾಡಿದ ಕರ್ಟಿಸ್ ಕ್ಯಾಂಫರ್, 26 ರನ್ ನೀಡಿ 4 ವಿಕೆಟ್ ಪಡೆದ ಸಾಧನೆ ಮಾಡಿದರು.

- Advertisement -


ಐರ್ಲೆಂಡ್ ವಿರುದ್ಧದ ಲೀಗ್’ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.ಆದರೆ ನಾಯಕನ ನಿರ್ಧಾರವನ್ನು ಸಮರ್ಥಿಸುವ ಬ್ಯಾಟಿಂಗ್ ತಂಡದಿಂದ ಮೂಡಿ ಬರಲಿಲ್ಲ. ಆರಂಭಿಕ ಮ್ಯಾಕ್ಸ್‌ಒ ಡೌಡ್ ಮಾತ್ರ ಏಕಾಂಗಿ ಹೋರಾಟ ನಡೆಸಿ ಅರ್ಧ ಶತಕ ದಾಖಲಿಸಿದರು. ನೆದರ್ಲೆಂಡ್ಸ್ ತಂಡದ ಐವರು ನಾಲ್ವರು ಆಟಗಾರರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 106 ರನ್‌ಗಳಿಗೆ ನೆದರ್ಲೆಂಡ್ಸ್ ಆಲೌಟ್ ಆಗಿತ್ತು

107 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಕೂಡ ಆರಂಭದಲ್ಲಿ ಉತ್ತಮವಾಗಿ ಇರಲಿಲ್ಲ. 27 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಐರ್ಲೆಂಡ್ 36 ರನ್‌ಗೆ ಎರಡನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್‌ಗೆ ಜೊತೆಯಾದ ಗ್ಯಾರಟ್ ಡೆಲಾನಿ ಉತ್ತಮ ಜೊತೆಯಾಟ ನೀಡಿದರು. ಈ ಮೂಲಕ ನೆದರ್ಲ್ಯಾಂಡ್‌ಗೆ ಯಾವ ಅವಕಾಶಗಳು ಇಲ್ಲದಂತೆ ಮಾಡಿದರು. 29 ಎಸೆತ ಎದುರಿಸಿದ ಡೆಲಾನಿ 44 ನ್‌ಗಳಿಸಿದ್ದರು. ಆರಂಭಿಕ ಆಟಗಾರ ಸ್ಟಿರ್ಲಿನ್ ಅಜೇಯ 30 ರನ್‌ಗಳಿಸಿದ್ದಾರೆ. ಅಂತಿಮವಾಗಿ 15.1 ಓವರ್‌ಗಳಲ್ಲಿ ಐರ್ಲೆಂಡ್ 3 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.

Join Whatsapp