ಏಷ್ಯಾದಲ್ಲೇ ದುಬಾರಿ ಅಪಾರ್ಟ್’ಮೆಂಟ್ ಮಾರಾಟ: ಬೆಲೆ ಎಷ್ಟು ಗೊತ್ತಾ..?

Prasthutha|

ಹಾಂಕಾಂಗ್ : ದೊಡ್ಡ ದೊಡ್ಡ ನಗರಗಳಲ್ಲಿ ಸೆಲೆಬ್ರಿಟಿಗಳು ದುಬಾರಿ ಮೌಲ್ಯದ ಅಪಾರ್ಟ್’ಮೆಂಟ್’ಗಳನ್ನು ಖರೀದಿಸಿದ ಸುದ್ದಿಗಳನ್ನು ನಾವು ದಿನನಿತ್ಯ ನೋಡುತ್ತೇವೆ. ಆದರೆ ಇದು ಹಾಗಲ್ಲ. ಹಾಂಕಾಂಗ್’ನಲ್ಲಿ ಅಪಾರ್ಟ್’ಮೆಂಟ್ ಒಂದು ಏಷ್ಯಾದಲ್ಲೇ ದುಬಾರಿ ಬೆಲೆಗೆ ಮಾರಾಟವಾಗಿದೆ.

- Advertisement -

ಹಾಂಕಾಂಗ್’ನ ಐಷಾರಾಮಿ ಐಲ್ಯಾಂಡ್ ಮೌಂಟ್ ನಿಕೋಲನ್ಸ್’ನಲ್ಲಿರುವ 4,544 ಚದರ ಅಡಿ ವಿಸ್ತೀರ್ಣದ ಅಪಾರ್ಟ್’ಮೆಂಟ್ ಬರೋಬ್ಬರಿ 611 ಕೋಟಿ ರುಪಾಯಿಗೆ ಮಾರಾಟವಾಗಿದೆ. ವಾರ್ಫ್ ಹೋಲ್ಡಿಂಗ್ಸ್ & ನ್ಯಾನ್ ಫಂಗ್ ಡೆವಲಪ್’ಮೆಂಟ್ ಲಿಮಿಟೆಡ್ ಕಂಪನಿಯು ಒಂದು ಚದರ ಅಡಿಗೆ 13.44 ಲಕ್ಷ ರುಪಾಯಿಯಂತೆ ಮಾರಾಟ ಮಾಡಿದ್ದು, ಇದು ಏಷ್ಯಾದಲ್ಲೇ ದುಬಾರಿಯಾಗಿದೆ.

ಹಾಂಕಾಗ್’ನ ದ್ವೀಪ ಪ್ರದೇಶದಲ್ಲಿರುವ ಈ ಅಪಾರ್ಟ್’ಮೆಂಟ್’ನಲ್ಲಿ ಪಾರ್ಕಿಂಗ್’ಗಾಗಿ ಮೂರು ಪ್ರತ್ಯೇಕ ಜಾಗಗಳಿವೆ. ಅತ್ಯಾಧುನಿಕ ಹಾಗೂ ಹತ್ತು ಹಲವು ಐಷಾರಾಮಿ ಸೌಲಭ್ಯಗಳನ್ನು ಈ ಅಪಾರ್ಟ್’ಮೆಂಟ್ ಹೊಂದಿದೆ. ಹಾಂಕಾಂಗ್’ನ ವಿಕ್ಟರ್ ಲೀ ಕಂಪನಿಯು ಒಂದು ಚದರ ಅಡಿಗೆ 1.36 ಹಾಂಕಾಂಗ್ ಡಾಲರ್’ಗೆ ಮಾರಾಟ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು.

Join Whatsapp