ಜಾಮೀನು ದೊರೆತರೂ ಆರ್ಯನ್ ಖಾನ್ ಪಾಲಿಸಬೇಕಿದೆ 14 ಷರತ್ತು..!

Prasthutha|

ಮುಂಬೈ : ಮುಂಬೈ ಕರಾವಳಿ ಸಮೀಪ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್’ ಗೆ ಗುರುವಾರ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಜಾಮೀನು ದೊರೆತರೂ ಆರ್ಯನ್ ಖಾನ್ ನಿರಾಳರಾಗುವಂತಿಲ್ಲ. ಜಾಮೀನು ನೀಡುವುದರ ಜೊತೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿದೆ.

- Advertisement -


ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನಿಂದ ಶುಕ್ರವಾರ ಆರ್ಯನ್ ಖಾನ್ ಬಿಡುಗಡೆಯಾಗಲಿದ್ದಾರೆ. ಆದರೆ ಪೊಲೀಸರಿಗೆ ಮಾಹಿತಿ ನೀಡದೆ ಆರ್ಯನ್ ಖಾನ್ ಮುಂಬೈ ಬಿಟ್ಟುಹೋಗುವಂತಿಲ್ಲ. 1 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್ ’ಪೋರ್ಟ್’ ಅನ್ನು ಮುಂಬೈ ಕೋರ್ಟ್’ಗೆ ಒಪ್ಪಿಸಬೇಕು. ಪ್ರತೀ ಶುಕ್ರವಾರ 11 ಗಂಟೆಗೆ NCB ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು. ಇದರ ನಡುವೆ NCB ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ತಿಳಿಸಿದರೆ ತಪ್ಪದೆ ಹಾಜರಾಗಬೇಕು. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾರನ್ನು ಭೇಟಿಯಾಗುವಂತಿಲ್ಲ. ಮಾಧ್ಯಮಗಳ ಎದುರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಹೇಳಿಕೆ ನೀಡುವಂತಿಲ್ಲ.


ಇದರಲ್ಲಿ ಯಾವುದೇ ಷರತ್ತುಗಳನ್ನು ಶಾರುಕ್ ಪುತ್ರ ಉಲ್ಲಂಘಿಸಿದ್ದಲ್ಲಿ, ಜಾಮೀನು ರದ್ದು ಮತ್ತೆ ತಮ್ಮ ವಶಕ್ಕೆ ನೀಡುವಂತೆ NCB ನ್ಯಾಯಾಲಯವನ್ನು ಕೋರಬಹುದು ಎಂದು ಜಾಮೀನಿನ ಷರತ್ತುಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಕ್ಟೋಬರ್ 3ರಂದು ಮುಂಬೈ ಕರಾವಳಿಯ ಸಮೀಪ ಕ್ರ್ಯೂಸ್ ಹಡಗಿನಲ್ಲಿ ಪಾರ್ಟಿ ನಡೆಯುತ್ತಿದ್ದ ವೇಳೆ NCB ಅಧಿಕಾರಿಗಳು ಮಫ್ತಿಯಲ್ಲಿ ದಾಳಿ ನಡೆಸಿದ್ದರು. ಇದೇ ವೇಳೆ ಶಾರುಕ್ ಖಾನ್ ಪತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಲಾಗಿತ್ತು. ಬಾಂಬೆ ಸೆಷನ್ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಲ್ಪಟ್ಟ ಕಾರಣ ಖಾನ್ ಪರ ವಕೀಲರು ಬಾಂಬೆ ಹೈಕೋರ್ಟ್’ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅರ್ಯನ್ ಖಾನ್ ಪರ ವಾದ ಮಂಡಿಸಿ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು.

- Advertisement -

Join Whatsapp