ಆರೆಸ್ಸೆಸ್ ಧಿರಿಸಿನಲ್ಲಿ ಪೊಲೀಸ್! ‘ನಾನವನಲ್ಲ’ ಎಂದ ಸುಳ್ಯ ಎಎಸ್ಸೈ!

Prasthutha|

ಮಂಗಳೂರು : ‘ಸಂಪ್ಯ ಪೊಲೀಸ್ ಅಧಿಕಾರಿ ಆರೆಸ್ಸೆಸ್ ಸಮವಸ್ತ್ರದಲ್ಲಿ’ ಎಂಬ ಒಕ್ಕಣೆಯೊಂದಿಗೆ ಒಂದು ಫೋಟೊ ಭಾರೀ ವೈರಲ್ ಆಗಿದೆ. ಫೋಟೋದಲ್ಲಿ ಮೂವರು ಕಾಣುತ್ತಿದ್ದು, ಒಬ್ಬರು ನಾರಾಯಣ ಗೌಡ ಅವರನ್ನು ಹೋಲುತ್ತಾರೆ. ಮೂಲತಃ ಸುಳ್ಯದ, ಸಂಪ್ಯ ಠಾಣೆಯಲ್ಲಿ ಎಎಸ್ಸೈ ಆಗಿರುವ ನಾರಾಯಣ ಗೌಡರನ್ನು ಆ ಫೊಟೋ ಹೋಲುತ್ತಿದೆ ಕೂಡ.

- Advertisement -

ಈ ಬಗ್ಗೆ ನಾರಾಯಣ ಗೌಡ ಸ್ಪಷ್ಟೀಕರಣ ನೀಡಿದ್ದಾರೆ. “ಕಳೆದ 6 ವರ್ಷಗಳಿಂದ ನಾನು ಸಂಪ್ಯ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದೇನೆ. ವೃತ್ತಿ ಕರ್ತವ್ಯದ ಕೆಲಸವಲ್ಲದೆ ನಾನು ಯಾವತ್ತೂ ಯಾವುದೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿಲ್ಲ. ನನಗೆ ಆಗದ ಯಾರೋ ಕಿಡಿಗೇಡಿಗಳಿಂದಾಗಿ ಅಪಪ್ರಚಾರವಾಗಿರಹುದು. ನಮ್ಮ ಸರ್ಕಲ್ ಇನ್ ಸ್ಪೆಕ್ಟರ್ ಮತ್ತು ಸಬ್ ಇನ್ ಸ್ಪೆಕ್ಟರ್ ನಿನ್ನೆ ರಾತ್ರಿ‌ ಈ ಫೋಟೊ ನನ್ನ ಗಮನಕ್ಕೆ ತಂದಿದ್ದಾರೆ. ಅವರಿಗೆ ಅದು ನಾನಲ್ಲವೆಂದು ಸ್ಪಷ್ಟಪಡಿಸಿದ್ದೇನೆ” ಎಂದು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.

Join Whatsapp