ಅಲಿಫ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಫುಟ್ ಬಾಲ್ ಜೆರ್ಸಿ ಲೋಕಾರ್ಪಣೆ

Prasthutha|

- Advertisement -

ನಾಟೆಕಲ್: ತಲಪಾಡಿಯ ಟೀಂ ಸಿನ್ಸ್ ಫುಟ್ ಬಾಲಿಯನ್ಸ್ ವತಿಯಿಂದ ಮಾ.10 ಆದಿತ್ಯವಾರ ದ.ಕ. ಮತ್ತು ಕಾಸರಗೋಡು ಜಿಲ್ಲೆಗಳ ಏಳು ಜನರ ಆಹ್ವಾನಿತ ತಂಡಗಳ ಗಡಿನಾಡು ಟ್ರೋಫಿ. ಹೊನಲು ಬೆಳಕಿನ ಫುಟ್ ಬಾಲ್ ಪಂದ್ಯಾಕೂಟ ಸಮಾರೋಪ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ದೇರಳಕಟ್ಟೆಯ ಅಲಿಫ್ ಪಬ್ಲಿಕ್ ಸ್ಕೂಲಿನ ಮಕ್ಕಳ ಫುಟ್ ಬಾಲ್ (ಜೆರ್ಸಿ) ಕ್ರೀಡಾ ಸಮವಸ್ತ್ರ ಬಿಡುಗಡೆಗೊಂಡಿತು.

ಸಮವಸ್ತ್ರವನ್ನು ಅಲಿಫ್ ಪಬ್ಲಿಕ್ ಸ್ಕೂಲ್ ಸಂಸ್ಥೆ ಅಧ್ಯಕ್ಷ ಎ.ಬಿ ಹುಸೇನ್ ಸಮ್ಮುಖದಲ್ಲಿ ಜನಾಬ್ ಅಬ್ದುಲ್ ಚನಕ್ಕಲ್ ಹಾಜಿ ಅವರು ಲೋಕಾರ್ಪಣೆಗೊಳಿಸಿದರು.

- Advertisement -

ಈ ಸಂದರ್ಭದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಜನಾಬ್ ಚನಕ್ಕಲ್ ಅಬ್ದುಲ್ ಮಜೀದ್ ಹಾಜಿ ಅವರನ್ನು ಗೌರವಪೂರವಾಗಿ ಸನ್ಮಾನಿಸಲಾಯಿತು.

ಗಡಿನಾಡು ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಜನಾಬ್ ಸಿದ್ಧಿಕ್ ತಲಪಾಡಿ ಅಧ್ಯಕ್ಷತೆ ವಹಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ
ಉದ್ಯಮಿ ಜನಾಬ್ ಮುನೀರ್, ಉದ್ಯಮಿ ಜನಾಬ್ ಅಬ್ದುಲ್ ಲತೀಫ್ ಯುನಿವರ್ಸಲ್, ಕೌನ್ಸಿಲರ್ ಜನಾಬ್ ಅಬ್ದುಲ್ ಸಲಾಂ ಯು, ವಕ್ತಾರರು ಜನಾಬ್ ನಾಸಿರ್ ಖಾನ್, (ಎಂ. ಡಬ್ಲ್ಯೂ,ಎ) ಜನಾಬ್ ಮೊಹಮ್ಮದ್ ಅಲಿ ಜಿ.ಐ, ಸಂಸ್ಥೆಯ ವ್ಯವಸ್ಥಾಪಕ ಬಿ. ಎಮ್ ಮಹಮ್ಮದ್ ಸಲೀಂ, ಮತ್ತಿತರರು ಪಾಲ್ಗೊಂಡಿದ್ದರು.

ಯೂಸುಫ್ ತಲಪಾಡಿ ಸಹಕರಿಸಿದರು. ಸಾಮಾಜಿಕ ಕಾರ್ಯಕರ್ತ ಜನಾಬ್ ಸಲಾಂ ಉಚ್ಚಿಲ್ ಸ್ವಾಗತಿಸಿದರು.



Join Whatsapp