ಮಂಗಳೂರು: ಚೈತನ್ಯ ಪಬ್ಲಿಕ್ ಸ್ಕೂಲ್ ಕೃಷ್ಣಾಪುರದಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಾರ್ಯಗಾರ ನಡೆಯಿತು.
ಕಾರ್ಯಗಾರದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ, ಪ್ರಸಕ್ತ ಖಾಯಂ ಲೋಕ್ ಅದಾಲತ್ ಅಧ್ಯಕ್ಷ ಅಭಯ್ ಧನಪಾಲ್ ಚೌಗುಲೆ, ಬಾಲ್ಯ ವಿವಾಹ ನಡೆಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ, ಅಂತಹ ಮದುವೆ ನಡೆದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು, ಮಕ್ಕಳ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯವು ಶಿಕ್ಷೆಗೆ ಅರ್ಹವಾದುದು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಇಂತಹ ಪಿಡುಗುಗಳನ್ನು ನಿರ್ಮೂಲನೆ ಮಾಡುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಕೀಲರಾದಂತಹ ಓಮರ್ ಫಾರೂಕ್ ಮುಲ್ಕಿಯವರು ಸಭೆಯಲ್ಲಿ ಉಪಸ್ಥಿತರಿದ್ದರು, ಶಾಲಾ ಅಧ್ಯಕ್ಷರಾದ ಕೆ .ಎ ಖಾದರ್, ಸಂಚಾಲಕರಾದ ಎಂ.ಎ ಹನೀಫ್, ಕಾರ್ಯದರ್ಶಿಯವರಾದ ಶೇಕ್ ಅಹ್ಮದ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶಶಿಕಲಾ ರವರು ನಡೆಸಿಕೊಟ್ಟರು.