ಮಂಗಳೂರು | ಮಾಸ್ಕ್ ಧರಿಸಿದವರಿಗೆ ಹೂ ಕೊಟ್ಟ ಕಮಿಷನರ್!

Prasthutha|

ಮಂಗಳೂರು : ಉಲ್ಭಣಗೊಂಡ ಕೊರೊನಾ ತಡೆಗಟ್ಟುವ ಸಲುವಾಗಿ ಕರ್ನಾಟಕದಾಂತ್ಯ ವೀಕೆಂಡ್ ಕರ್ಫ್ಯೂ ಹೇರಲಾಗಿದ್ದು, ಅದಲ್ಲದೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮೇ ನಾಲ್ಕರವರೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ .

- Advertisement -

ನಗರದ ಹಂಪನಕಟ್ಟೆ , ಮಾರ್ಕೆಟ್ ರೋಡ್ , ಫಳ್ನೀರ್ ಭಾಗದ ಅಂಗಡಿಗಳಿಗೆ ಸ್ವತಹ ಕಮಿಷನರ್ ಶಶಿಕುಮಾರ್ ಸೇರಿದಂತೆ ಡಿಸಿಪಿ ಹರಿರಾಂ ಶಂಕರ್ ಜಂಟಿಯಾಗಿ ಫೀಲ್ಡಿಗಿಳಿದು ಆದೇಶ ಧಿಕ್ಕರಿಸಿ ಅಂಗಡಿಗಳನ್ನು ತೆರೆದವರ ವಿರುಧ್ದ ಪ್ರಕರಣ ದಾಖಲಿಸಿಲು ಆದೇಶಿಸಿದರು.
ಇನ್ನು ಕೋವಿಡ್ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸಿದವರಿಗೆ ಸ್ವತಹ ಹೂವನ್ನು ನೀಡಿ ಅಭಿನಂದಿಸಿದರೆ , ಮಾಸ್ಕ್ ಹಾಕದೆ ತಿರುಗಾಡಿದವರಿಗೆ ದಂಡ ವಿಧಿಸಿದ ಘಟನೆಯೂ ನಡೆಯಿತು.

Join Whatsapp