ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ: ಮುಖ್ಯಮಂತ್ರಿ ಪರಿಶೀಲನೆ

Prasthutha|

ಬೆಂಗಳೂರು: ಯಲಹಂಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ ಜೊತೆ ಪರಿಶೀಲನೆ ನಡೆಸಿದರು.

- Advertisement -


ಯಲಹಂಕ ವಲಯದ ಕೇಂಪೇಗೌಡ ವಾರ್ಡ್ ನಲ್ಲಿ ಜಲಾವೃತಗೊಂಡಿದ್ದ ಕೇಂದ್ರೀಯ ವಿಹಾರ ಅಪಾರ್ಟೆಂಟ್ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಭವಿಷ್ಯದಲ್ಲಿ ಇಂತಹ ಅನಾಹುತ ನಡೆಯದಂತೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.


ತೆರೆದ ಜೀಪಿನಲ್ಲಿ ಮುಖ್ಯಮಂತ್ರಿ ನೀರು ತುಂಬಿದ್ದ ವಾರ್ಡ್ ನಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತ ದಯಾನಂದ್, ಜಂಟಿ ಆಯುಕ್ತರಾದ ಪೂರ್ಣಿ ಮಾ ಉಪಸ್ಥಿತರಿದ್ದರು.



Join Whatsapp