ಸೌದಿ ಅರೇಬಿಯಾದ ಪ್ರಯಾಣ ನಿಷೇಧ ತೆರವು | ಇಂದಿನಿಂದ ಅಂತಾರಾಷ್ಟ್ರೀಯ ವಿಮಾನ ಮರು ಆರಂಭ

Prasthutha|

ರಿಯಾಧ್ : ಇಂಗ್ಲೆಂಡ್ ನಲ್ಲಿ ಭಾರೀ ತೀವ್ರವಾಗಿ ಹರಡಲ್ಪಟ್ಟಿದ್ದ ರೂಪಾಂತರಿತ ಕೊರೊನ ವೈರಸ್ ಕಾರಣ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಹೇರಲ್ಪಟ್ಟಿದ್ದ ತಾತ್ಕಾಲಿಕ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ.

- Advertisement -

ಇಂಗ್ಲೆಂಡ್ ನಿಂದ ವಿಮಾನ, ಭೂ ಮತ್ತು ಸಮುದ್ರ ಮಾರ್ಗದ ಪ್ರಯಾಣ ಭಾನುವಾರ 11 ಗಂಟೆಯಿಂದ ಮರು ಆರಂಭವಾಗಲಿದೆ ಎಂದು ಸೌದಿ ಆಡಳಿತ ಮೂಲಗಳು ತಿಳಿಸಿವೆ.

ಯುಕೆ, ದಕ್ಷಿಣ ಆಫ್ರಿಕಾ ಮತ್ತು ಇತರ ರಾಷ್ಟ್ರಗಳಲ್ಲಿ ರೂಪಾಂತರಿತ ಕೋವಿಡ್ 19 ಪತ್ತೆಯಾದ ಸಂದರ್ಭ ಸೌದಿಯೇತರರು ಸೌದಿ ಅರೇಬಿಯಾಕ್ಕೆ ಆಗಮಿಸುವುದಕ್ಕೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಹೊಸ ರೂಪಾಂತರಿತ ಕೋವಿಡ್ 19 ಹರಡಿರುವ ರಾಷ್ಟ್ರಗಳಿಂದ ಬರುವವರಿಗೆ 14 ದಿನಗಳ ವರೆಗೆ ನಿರೀಕ್ಷಣೆಯಲ್ಲಿರುತ್ತಾರೆ.  

Join Whatsapp