ವಿರಾಜಪೇಟೆ ತಹಶೀಲ್ದಾರ್ ಆಗಿ ಫ್ಲೈಟ್ ಲೆಫ್ಟಿನೆಂಟ್ ಡಿ.ಅರ್ಚನಾ ಭಟ್ ನೇಮಕ

Prasthutha|

ವಿರಾಜಪೇಟೆ: ನಿವೃತ್ತ ವಾಯುಸೇನಾ ಅಧಿಕಾರಿ ಡಿ.ಅರ್ಚನಾ ಭಟ್ ಅವರು ವಿರಾಜಪೇಟೆಯ ನೂತನ ತಹಶೀಲ್ದಾರ್ ಆಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

- Advertisement -


ಜಿಲ್ಲೆಯಲ್ಲಿ ಮಾಜಿ ಸೈನಿಕರಿಗೆ ಬಹಳಷ್ಟು ಸಮಸ್ಯೆಗಳು ಇರುವುದರಿಂದ ಸೇನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಒಬ್ಬರು ತಹಶೀಲ್ದಾರ್ ಆಗಿ ಜಿಲ್ಲೆಗೆ ಬಂದಿರುವುದು ಮಾಜಿ ಸೈನಿಕರ ಬಳಗದಲ್ಲಿ ಸಂತಸ ವ್ಯಕ್ತವಾಗಿದೆ.


ಈ ಹಿಂದೆ ಕರ್ತವ್ಯದಲ್ಲಿದ್ದ ಯೋಗನಂದ ಅವರ ವರ್ಗಾವಣೆ ಹಿನ್ನೆಲೆ ಅರ್ಚನಾ ಭಟ್ ಅವರು ನೂತನ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ.

Join Whatsapp