ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ 12 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ದ.ಕ ಜಿಲ್ಲಾದ್ಯಂತ ಪುತ್ತೂರು, ಬೆಳ್ತಂಗಡಿ,ಕಡಬ, ಸುಳ್ಯ, ವಿಟ್ಲ, ಬಂಟ್ವಾಳ, ಮಂಗಳೂರು ತಾಲೂಕಿನಲ್ಲಿ ಸುಮಾರು 60 ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಸ್ವದಕತ್ ಶಾ, ಕ್ಯಾಂಪಸ್ ಫ್ರಂಟ್ ಸ್ಥಾಪನೆಗೊಂಡು ಇಂದಿಗೆ 12 ವರ್ಷಗಳು ಪೂರ್ಣಗೊಳ್ಳುತ್ತಿದ್ದು ಈ ಶುಭ ಸಂದರ್ಭವೂ ನಮ್ಮ ಸಂಘಟನೆಯ ಪ್ರಭಾವ ಮತ್ತು ಬೆಳವಣಿಗೆಯ ಕುರಿತು ಅರಿತಾಗ ತುಂಬಾ ಸಂತೋಷವಾಗುತ್ತದೆ ಮತ್ತು ಅದರ ಜೊತೆಗೆ ಮುಂದಿನ ಸವಾಲುಗಳನ್ನು ಎದುರಿಸುವ ಕುರಿತು ಹುಮ್ಮಸ್ಸು ತುಂಬುತ್ತೆ.ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಖ್ಯಾತೆ ಪಡೆದ ಭಾರತದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯದಲ್ಲಿದೆ ಎಂಬ ಆತಂಕಕಾರಿ ಕೂಗುಗಳು, ಧ್ವನಿಗಳು ಮೊಳಗುತ್ತಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ರೋಶನ್ ತುಮಕೂರು,ಕಾರ್ಯದರ್ಶಿಗಳಾದ ಸಾಧಿಕ್ , ಅಲ್ತಾಫ್ ಹಾಗೂ ರಾಜ್ಯ ಕೋಶಾಧಿಕಾರಿಯಾದ ಸವಾದ್ ಕಲ್ಲರ್ಪೆ ಮತ್ತು ರಾಜ್ಯ ಸಮಿತಿ ಸದಸ್ಯರಾದ ಫಹದ್, ಸಿರಾಜ್, ಮಸೂದ್, ಚಾಂದ್ ,ಝುಬೇರ್, ಜಿಲ್ಲಾ ಮಖಂಡರಾದ ತಾಜುದ್ದೀನ್, ಶಂಸು ವಿಟ್ಲ, ಶರ್ಫುಧ್ಧೀನ್, ಹಫೀಝ್, ಅಶ್ರಫ್, ಸರಫರಾಝ್ , ಫಯಾಝ್ ,ಅಶ್ಫಾಕ್, ಐಮಾನ್, ಅನ್ಸಾರ್, ಮುಸ್ತಫ, ಯಾಸೀನ್ ಹಾಗೂ ರಿಝ್ವಾನ್ ಉಪಸ್ಥಿತರಿದ್ದರು.