ದಿನದ 24 ಗಂಟೆಯೂ ಧ್ವಜ ಹಾರಿಸಬಹುದು: ಯಂತ್ರದಿಂದ ತಯಾರಿಸಿದ ಧ್ವಜವೂ ಒಕೆ: ಕೇಂದ್ರ ಸರಕಾರ

Prasthutha|

ನವದೆಹಲಿ: ಕೇಂದ್ರ ಸರ್ಕಾರವು ಧ್ವಜ ಸಂಹಿತೆಯಲ್ಲಿ ನವೀನ ಬದಲಾವಣೆ ಮಾಡಿದ್ದು, ಅದರ ಅಡಿಯಲ್ಲಿ ಈಗ ತ್ರಿವರ್ಣ ಧ್ವಜವನ್ನು ಹಗಲು ರಾತ್ರಿ ಹಾರಿಸಲು ಅನುಮತಿಸಲಾಗಿದೆ. ಇನ್ನು ಮುಂದೆ ರಾಷ್ಟ್ರಧ್ವಜವನ್ನು ರಾತ್ರಿಯೂ ಹಾರಿಸಬಹುದು ಮತ್ತು ಯಂತ್ರದಿಂದ ತಯಾರಿಸಿದ ಹಾಗೂ ಪಾಲಿಸ್ಟರ್ ಧ್ವಜಗಳನ್ನೂ ಬಳಸಬಹುದಾಗಿದೆ ಎಂದು ಹೇಳಿದೆ.

- Advertisement -

ಆಗಸ್ಟ್ 13ರಿಂದ 15ರ ವರೆಗೆ ನಡೆಯಲಿರುವ ‘ಹರ್ ಘರ್ ತಿರಂಗ’(ಪ್ರತಿಯೊಬ್ಬರ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನದ ಸಲುವಾಗಿ,  ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಬದಲಾವಣೆಯಾಗಿರುವ ಧ್ವಜ ಸಂಹಿತೆಯ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

- Advertisement -

ಈ ಹಿಂದೆ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಮಾತ್ರ ತ್ರಿವರ್ಣ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಧ್ವಜಗಳನ್ನು ಬಳಸಲು ಅನುಮತಿ ಇರಲಿಲ್ಲ.

ಆದರೆ ಅದನ್ನು ಬದಲಿಸಿದ ಕೇಂದ್ರ ಸರಕಾರ ಇನ್ನು ದಿನ 24 ಗಂಟೆಯೂ ಧ್ವಜ ಹಾರಿಸಬಹುದು, ಯಂತ್ರದಿಂದ ತಯಾರಿಸಿದ ಧ್ವಜವನ್ನೂ ಬಳಸಬಹುದು ಎಂದಿದೆ.

Join Whatsapp