ದೇಶಿ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಭೂತ| ಖದೀಮನಿಗೆ ಶೋಧ

Prasthutha|

ಬೆಂಗಳೂರು: ದೇಶಿ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಭೂತ ಮತ್ತೆ ತಲೆ ಎತ್ತಿದ್ದು, ದೇಶೀಯ ಕ್ರಿಕೆಟ್ ಋತು ಆರಂಭಕ್ಕೂ ಮುನ್ನವೇ ಬುಕ್ಕಿಗಳು ಆಟಗಾರರ ಮೇಲೆ ವಕ್ರದೃಷ್ಟಿ ನೆಟ್ಟಿರುವುದು ಬೆಳಕಿಗೆ ಬಂದಿದೆ.

- Advertisement -


ತಮಿಳುನಾಡಿನ ಖ್ಯಾತ ಆಲ್​ರೌಂಡರ್​​ ಆಟಗಾರನಿಗೆ ಫಿಕ್ಸಿಂಗ್​​ನಲ್ಲಿ ಶಾಮಿಲಾಗುವಂತೆ ಖತರ್ನಾಕ್ ಖದೀಮನೊಬ್ಬ ನಗರದಲ್ಲಿ ಕುಳಿತು‌ ಆಫರ್ ನೀಡಿರುವುದು ಪತ್ತೆಯಾಗಿದೆ.


ತಮಿಳುನಾಡು ರಾಜ್ಯ ರಣಜಿ ತಂಡದ ಸದಸ್ಯ ಸತೀಶ್ ರಾಜಗೋಪಾಲ್ ಅವರಿಗೆ ಇನ್ಸ್ಟಾಗ್ರಾಮ್​​ ಮೂಲಕ ಮೆಸೇಜ್​ ಮಾಡಿರುವ ಖದೀಮ ಮುಂಬರುವ ಟಿಎನ್​ಪಿಎಲ್​​ನಲ್ಲಿ ಫಿಕ್ಸಿಂಗ್​​ನಲ್ಲಿ‌ ಭಾಗಿಯಾಗಬೇಕು ಎಂದು ಆಫರ್​ ನೀಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್​ಗೆ ಒಪ್ಪಿದ್ದಾರೆ . ನೀವು ಭಾಗಿಯಾದರೆ ಪ್ರತೀ ಪಂದ್ಯಕ್ಕೆ 40 ಲಕ್ಷ ನೀಡುವುದಾಗಿ ಬನ್ನಿ ಆನಂದ್ ಎಂಬಾತನ‌ ಇನ್ಸ್ಟಾಗ್ರಾಮ್ ಖಾತೆಯಿಂದ ಆಫರ್ ನೀಡಿರುವುದು ಬಹಿರಂಗವಾಗಿದೆ.

- Advertisement -


ಸತೀಶ್ ರಾಜಗೋಪಾಲ್ ಆಫರ್ ತಿರಸ್ಕರಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಬಿಸಿಸಿಐನಿಂದ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಮತ್ತು ಇಂಟಿಗ್ರಿಟಿ ಯೂನಿಟ್​​ಗೆ ತಿಳಿಸಿದ್ದು, ಸದ್ಯ ಸೌತ್ ಜೋನ್ ಆ್ಯಂಟಿ ಕರೆಪ್ಷನ್ ಯೂನಿಟ್ ಜಯನಗರ ಠಾಣೆಗೆ ದೂರು ನೀಡಿದ್ದಾರೆ.


ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.



Join Whatsapp