ಪಂಚ ರಾಜ್ಯಗಳ ಚುನಾವಣೆ: ವಶಪಡಿಸಿಕೊಂಡ ಡ್ರಗ್ಸ್, ನಗದು ಮೌಲ್ಯ 1,760 ಕೋಟಿ ರೂ.

Prasthutha|

ನವದೆಹಲಿ: ಮಿಜೋರಾಂ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಉದ್ದೇಶಿಸಲಾಗಿದ್ದ ನಗದು, ಮದ್ಯ ಮತ್ತು ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೆ 1,760 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚು ಎಂದು ಆಯೋಗ ತಿಳಿಸಿದೆ. ಕಳೆದ ಸಲ (239.15 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಎಂದು ಚುನಾವಣಾ ಆಯೋಗ ತಿಳಿಸಿದೆ.

- Advertisement -

ಪಂಚರಾಜ್ಯಗಳಲ್ಲಿ ಅ.9ರಂದು ಚುನಾವಣೆ ಘೋಷಣೆಯಾಗಿತ್ತು. ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಿಜೋರಾಂನಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ನಡೆದಿದೆ. ರಾಜಸ್ತಾನದಲ್ಲಿ ನ.25 ಮತ್ತು ತೆಲಂಗಾಣದಲ್ಲಿ ನ.30ರಂದು ಮತದಾನ ನಡೆಯಲಿದೆ. ಡಿ.3ರಂದು ಈ ಐದು ರಾಜ್ಯಗಳ ಮತ ಎಣಿಕೆ ನಡೆಯಲಿದೆ.



Join Whatsapp