ಕೆರೆಯಲ್ಲಿ ಮುಳುಗಿ ಐವರು ಅಪ್ರಾಪ್ತ ಬಾಲಕರು ಮೃತ್ಯು

Prasthutha|

ಗುಜರಾತ್: ಐವರು ಅಪ್ರಾಪ್ತ ಮಕ್ಕಳು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

- Advertisement -

ಈಜುತ್ತಿದ್ದ ವೇಳೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಎಲ್ಲಾ ಐದು ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರು ಬಾಲಕರು ಕೃಷ್ಣ ಸಾಗರ ಕೆರೆಯಲ್ಲಿ ಮಧ್ಯಾಹ್ನ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಇತರ ಮೂವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಇಬ್ಬರನ್ನು ರಕ್ಷಿಸಲು ನೀರಿಗೆ ಹಾರಿ ಅವರೂ ಕೂಡ ಪ್ರಾಣಬಿಟ್ಟಿದ್ದಾರೆ. ಮೃತರು ಎಲ್ಲರೂ 16-17 ವರ್ಷದೊಳಗಿನವರಾಗಿದ್ದಾರೆ, ತನಿಖೆ ನಡೆಯುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Join Whatsapp