ಹೈದರಾಬಾದ್: ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಐವರು ಮೃತಪಟ್ಟಿದ್ದಾರೆ.
ಇವರೆಲ್ಲರೂ ಮುಮ್ಮಿಡಿವರಂ ಕ್ಷೇತ್ರದ ವೈಎಸ್ ಆರ್ ಸಿಪಿ ಶಾಸಕ ಪೊನ್ನಡ ಸತೀಶ ಅವರ ನಿಕಟ ಸಂಬಂಧಿಗಳು ಎಂದು ತಿಳಿದು ಬಂದಿದೆ. ಪೊನ್ನಡ ನಾಗೇಶ್ವರ ರಾವ್, ಅವರ ಪತ್ನಿ ಸೀತಾ ಮಹಾಲಕ್ಷ್ಮಿ, ಮಗಳು ನವೀನಾ ಗಂಗಾ ಹಾಗೂ ಮೊಮ್ಮಗ ಮತ್ತು ಮೊಮ್ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಳಿಯ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರ ಕುಟುಂಬದ ಮೂಲಗಳ ಪ್ರಕಾರ, ಅವರ ಚಿಕ್ಕಪ್ಪ ಮತ್ತು ಕುಟುಂಬದವರು ಅಟ್ಲಾಂಟಾದಲ್ಲಿ ವಾಸಿಸುತ್ತಿದ್ದರು. ಕ್ರಿಸ್ಮಸ್ ಪ್ರವಾಸದ ನಂತರ ಟೆಕ್ಸಾಸ್ನಿಂದ ಅಟ್ಲಾಂಟಾಗೆ ಮರಳುವಾಗ ಡಿಸೆಂಬರ್ 26 ರಂದು ಸಂಜೆ 4 ಗಂಟೆಗೆ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.