ಕುಸ್ತಿ ಅಖಾಡದಲ್ಲಿ ಗುಂಡಿನ ದಾಳಿ; ಇಬ್ಬರು ಮಹಿಳಾ ಕುಸ್ತಿಪಟುಗಳು, ಕೋಚ್ ಸೇರಿ ಐವರ ಹತ್ಯೆ; ಇಬ್ಬರಿಗೆ ಗಾಯ

Prasthutha|

ರೋಹ್ಟಕ್ : ಹರ್ಯಾಣದ ರೋಹ್ಟಕ್ ನ ಕುಸ್ತಿ ಕೇಂದ್ರ(ಅಖಾಡ)ವೊಂದರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

- Advertisement -

ಖಾಸಗಿ ಕಾಲೇಜೊಂದರ ಬಳಿಯಿರುವ ಕುಸ್ತಿ ಕೇಂದ್ರ, ಮೆಹರ್ ಸಿಂಗ್ ಅಖಾಡದಲ್ಲಿ ಈ ಘಟನೆ ನಡೆದಿದೆ. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಚ್ ಗಳ ನಡುವಿನ ವೈಷಮ್ಯ ಈ ದುರಂತಕ್ಕೆ ಕಾರಣವಾಗಿದೆ. ಕುಸ್ತಿ ಕೋಚ್ ಒಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಏಳು ಮಂದಿಗೆ ಗಾಯಗಳಾಗಿದ್ದು, ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರನ್ನು ಗುರುತಿಸಲಾಗಿದೆ. ಮೃತರಲ್ಲಿ ಒಂದು ಮೂರು ವರ್ಷದ ಮಗು ಕೂಡ ಸೇರಿದೆ. ಮೃತರಲ್ಲಿ ಇಬ್ಬರು ಕುಸ್ತಿಪಟುಗಳು ಮತ್ತು ಒಬ್ಬರು ಕೋಚ್ ಎನ್ನಲಾಗಿದೆ.

Join Whatsapp