ಚೀನಾ ಗಡಿ ಭಾಗದಲ್ಲಿ ನದಿ ದಾಟುವಾಗ ಟ್ಯಾಂಕ್ ಅಪಘಾತ: ಐವರು ಭಾರತೀಯ ಯೋಧರು ಹುತಾತ್ಮ

Prasthutha|

ನವದೆಹಲಿ: ಲೇಹ್’ನ ದೌಲತ್ ಬೇಗ್ ಓಲ್ಡಿ ಪ್ರದೇಶದ ಎಲ್ ಎಸಿ ಬಳಿ ನದಿ ದಾಟುವ ವೇಳೆ ಟ್ಯಾಂಕ್ ಅಪಘಾತವಾಗಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ.

- Advertisement -


ರಾತ್ರಿ 1 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಹುತಾತ್ಮರಾದ ಐವರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಅಥವಾ ಜೆಸಿಒ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು. ಲೇಹ್ ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೋಧಿ ನದಿಯನ್ನು ತಮ್ಮ T-72 ಟ್ಯಾಂಕ್ ಮೂಲಕ ದಾಟುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನ ಮಟ್ಟ ಏರಲು ಪ್ರಾರಂಭಿಸಿತು. ತಕ್ಷಣವೇ ಟ್ಯಾಂಕ್ ನೊಂದಿಗೆ ಸೈನಿಕರು ಉಬ್ಬುವ ನದಿಯಲ್ಲಿ ಮುಳುಗಿ ಹೋದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Join Whatsapp