ಟ್ರಕ್ ನದಿಗೆ ಬಿದ್ದು ಮಕ್ಕಳು ಸೇರಿ ಐವರು ಸಾವು

Prasthutha|

ಭೋಪಾಲ್: ಮದುವೆ ಮನೆಗೆ ಅತಿಥಿಗಳನ್ನು ಹೊತ್ತು ಸಾಗುತ್ತಿದ್ದ ಟ್ರಕ್ ಒಂದು ನದಿಗೆ ಉರುಳಿದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ ನಡೆದಿದೆ.

- Advertisement -


65 ವರ್ಷದ ಮಹಿಳೆ, 18 ವರ್ಷದ ಪುರುಷ ಹಾಗೂ ಎರಡು-ಮೂರು ವರ್ಷದೊಳಗಿನ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.


ಇಪ್ಪತ್ನಾಲ್ಕು ಜನರು ಗಾಯಗೊಂಡಿದ್ದಾರೆ ಮತ್ತು ಅಪಘಾತದ ನಂತರ ಹಲವಾರು ಮಕ್ಕಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

- Advertisement -

ಮೃತರೆಲ್ಲರೂ ಗ್ವಾಲಿಯರ್ ನ ಬಿಲ್ಹೆಟಿ ಗ್ರಾಮದವರಾಗಿದ್ದು, ಇವರೆಲ್ಲರೂ ಟಿಕಮ್ ಗರ್ ನಲ್ಲಿ ನಡೆಯುತ್ತಿದ್ದ ಮಗಳ ಮದುವೆಗೆ ತೆರಳುತ್ತಿದ್ದರು.