ಮೀನುಗಾರಿಕೆಗೆ ತೆರಳಿದ್ದ ಬೋಟು ಮುಳುಗಡೆ – ಮೀನುಗಾರರ ರಕ್ಷಣೆ

Prasthutha|

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಒಂದು ಸಮುದ್ರದಲ್ಲಿ ಮುಳುಗಿದ್ದು, ಈ ಬೋಟಿನಲ್ಲಿದ್ದ 11 ಮಂದಿ ಮೀನುಗಾರರನ್ನು ಮತ್ತೊಂದು ಮೀನುಗಾರಿಕಾ ಬೋಟ್‌ನಲ್ಲಿ ಇದ್ದವರು ರಕ್ಷಿಸಿ ತೀರಕ್ಕೆ ಕರೆ ತಂದಿದ್ದಾರೆ.

- Advertisement -

ಪಣಂಬೂರು ಸಮುದ್ರ ತೀರದಿಂದ ಸುಮಾರು 60 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು, ಈ ಬೋಟ್‌ನಲ್ಲಿ 11 ಮಂದಿ ಮೀನುಗಾರರಿದ್ದರು.

ಎಲ್ಲಾ ಮೀನುಗಾರರು ಸುರಕ್ಷಿತವಾಗಿ ತೀರ ತಲುಪಿದ್ದು, ಬೋಟ್ ಮಾತ್ರ ಸಮುದ್ರದಲ್ಲಿ ಮುಳುಗಿದೆ.

Join Whatsapp