ವಕೀಲ ವೃತ್ತಿಗೆ ರಾಜ್ಯದ ಪ್ರಪ್ರಥಮ ತೃತೀಯ ಲಿಂಗಿ

Prasthutha|

ಮೈಸೂರು : ಇಲ್ಲಿನ ಜಯನಗರ ನಿವಾಸಿಯಾಗಿರುವ ಶಶಿ ರಾಜ್ಯದಲ್ಲೇ ಪ್ರಥಮ ತೃತೀಯ ಲಿಂಗಿ ವಕೀಲೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

- Advertisement -

ಶಶಿಕುಮಾರ್ ಎಂಬ ಹೆಸರಿನ ನಾನು ಹತ್ತನೇ ತರಗತಿಯಲ್ಲಿದ್ದಾಗಲೇ ದೇಹದಲ್ಲಿ ಬದಲಾವಣೆ ಸಂಭವಿಸಿದ್ದು, ನಾನು ತೃತೀಯ ಲಿಂಗಿಯಾಗಿ ಗೋಚರಗೊಂಡಿದ್ದೇನೆ. ಆ ಬಳಿಕ ಅವಮಾನ, ಅಪಮಾನಗಳನ್ನೆಲ್ಲಾ ಎದುರಿಸಿ ನಾನು ಎಲ್ ಎಲ್ ಬಿಯಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಸಹಕರಿಸಿದ ಸಹಪಾಠಿಗಳು ಮತ್ತು ಉಪನ್ಯಾಸಕರಿಗೆ ಅವರು ಧನ್ಯವಾದಗಳನ್ನು ಸಮರ್ಪಿಸಿದರು.

- Advertisement -

ತೃತೀಯ ಲಿಂಗಿಯಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಎಲ್ ಎಲ್ ಬಿ ಪೂರ್ತಿಗೊಳಿಸಿದ ಶಶಿ, ನಾನು ಪಟ್ಟ ಕಷ್ಟ ನೋವು ಯಾರೂ ಪಡಬಾರದು. ನಾನು ಸಮಾಜದಲ್ಲಿ  ತೃತೀಯ ಲಿಂಗಿಗಳ ಧ್ವನಿಯಾಗಿರಲು ಬಯಸುತ್ತೇನೆ ಎಂದು ಹೇಳಿದರು.

Join Whatsapp