ಇಂದಿನಿಂದ ಟೀಮ್‌ ಇಂಡಿಯಾ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್‌  ಪಂದ್ಯ

Prasthutha|

ಬಾಂಗ್ಲಾದೇಶ – ಟೀಮ್ ಇಂಡಿಯಾ ನಡುವಣ ಎರಡು ಪಂದ್ಯಗಳ ಕಿರು ಟೆಸ್ಟ್‌  ಸರಣಿಯ ಮೊದಲ ಪಂದ್ಯ ಬುಧವಾರದಿಂದ ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಆತಿಥೇಯರಿಗೆ ಶರಣಾಗಿರುವ ಭಾರತ, ಟೆಸ್ಟ್‌ ಸರಣಿಯನ್ನು ಗೆಲ್ಲುವ ಪಣತೊಟ್ಟಿದೆ.

- Advertisement -

ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ರೋಹಿತ್‌ ಶರ್ಮಾ ಭಾರತಕ್ಕೆ ಮರಳಿದ್ದಾರೆ. ಈ ಹಿನ್ನಲೆಯಲ್ಲಿ ಆರಂಭಿಕ ಕೆ.ಎಲ್‌ ರಾಹುಲ್‌ ತಂಡವನ್ನು ಮುನ್ನಡೆಸಲಿದ್ದು, ಅಭಿಮನ್ಯು ಈಶ್ವರನ್, ರೋಹಿತ್ ಬದಲಿ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಏಕದಿನ ಸರಣಿಗೆ ಅಲಭ್ಯರಾಗಿದ್ದ ರಿಷಭ್ ಪಂತ್ ತಂಡ ಸೇರಿಕೊಂಡಿದ್ದಾರೆ.

ಮತ್ತೋರ್ವ ಗಾಯಾಳು ಅನುಭವಿ ಮುಹಮ್ಮದ್‌ ಶಮಿ ಟೆಸ್ಟ್‌ ಸರಣಿಗೆ ಅಲಭ್ಯರಾಗಿದ್ದು, ಶಮಿ ಬದಲಿಗೆ ಎಡಗೈ ವೇಗದ ಬೌಲರ್‌ ಜಯದೇವ್‌ ಉನಾದ್ಕತ್‌ಗೆ ಬಿಸಿಸಿಐ ಅವಕಾಶ ನೀಡಿತ್ತು. ಆದರೆ ಬಾಂಗ್ಲಾದೇಶಕ್ಕೆ ತೆರಳಲು ಜಯದೇವ್‌ಗೆ ಇನ್ನು ವೀಸಾ ಲಭ್ಯವಾಗಿಲ್ಲ. ಹೀಗಾಗಿ 12 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಪರ ಕಣಕ್ಕಿಳಿಯಬೇಕಾಗಿದ್ದ ಜಯದೇವ್‌ ಎರಡನೇ ಟೆಸ್ಟ್‌ವರೆಗೂ ಕಾಯಬೇಕಾಗಿದೆ. ಇತ್ತೀಚೆಗೆ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಜಯದೇವ್‌ ಉನಾದ್ಕತ್ ಸಾರಥ್ಯದಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್‌ ಆಗಿತ್ತು.

- Advertisement -

ಶುಭ್‌ಮನ್ ಗಿಲ್ ನಾಯಕ ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಉಪ ನಾಯಕ ಚೇತೇಶ್ವರ್ ಪೂಜಾರ ಮತ್ತು ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಆಡುವ ಸಾಧ್ಯತೆಯಿದೆ.  ಆಲ್‌ರೌಂಡರ್​ ಸೌರಭ್ ಕುಮಾರ್​ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

Join Whatsapp