ದೇಶದಲ್ಲಿ ಮೊದಲ ಕಚ್ಚಾ ತೈಲ ನಿಕ್ಷೇಪ ಪತ್ತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Prasthutha|

ನವದೆಹಲಿ: ದೇಶದಲ್ಲಿ ಹೊಸ ತೈಲ ಆವಿಷ್ಕಾರವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಘೋಷಿಸಿದ್ದಾರೆ.

- Advertisement -

ನಿನ್ನೆ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿ, ಮೊದಲ ಬಾರಿಗೆ ತೈಲವನ್ನು ಹೊರತೆಗೆಯಲಾಯಿತು. ಇದರ ಕಾಮಗಾರಿ 2016-17ರಲ್ಲಿ ಪ್ರಾರಂಭವಾಯಿತು, ಆದರೆ ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾಯಿತು. ಅಲ್ಲಿನ 26 ಬಾವಿಗಳಲ್ಲಿ 4 ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದ್ದಾರೆ.

ಮೇ ಮತ್ತು ಜೂನ್ ವೇಳೆಗೆ, ದಿನಕ್ಕೆ 45,000 ಬ್ಯಾರೆಲ್ ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಉತ್ಪಾದನೆಯು ನಮ್ಮ ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇಕಡಾ 7 ರಷ್ಟು ಮತ್ತು ನಮ್ಮ ಅನಿಲ ಉತ್ಪಾದನೆಯ ಶೇಕಡಾ 7 ರಷ್ಟನ್ನು ಹೊಂದಿರುತ್ತದೆ” ಎಂದರು.

- Advertisement -

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಬಂಗಾಳ ಕೊಲ್ಲಿಯ ಕೃಷ್ಣ ಗೋದಾವರಿ ಡೀಪ್ವಾಟರ್ ಬ್ಲಾಕ್ 98/2 ನಿಂದ “ಮೊದಲ ತೈಲ” ಉತ್ಪಾದಿಸಲು ಪ್ರಾರಂಭಿಸಿದೆ. ತೈಲವನ್ನ ಹೊರತೆಗೆಯುವ ಸ್ಥಳವು ಕೃಷ್ಣ ಗೋದಾವರಿ ಜಲಾನಯನ ಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿ.ಮೀ ದೂರದಲ್ಲಿದೆ.

ಜಲಾನಯನ ಪ್ರದೇಶದಿಂದ ಗರಿಷ್ಠ ತೈಲ ಮತ್ತು ಅನಿಲ ಉತ್ಪಾದನೆಗಾಗಿ 3 ನೇ ಹಂತವು ಈಗಾಗಲೇ ನಡೆಯುತ್ತಿದೆ ಮತ್ತು ಜೂನ್ 2024 ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. 98/2 ಯೋಜನೆಯು ಒಎನ್ಜಿಸಿಯ ಒಟ್ಟು ತೈಲ ಮತ್ತು ಅನಿಲ ಉತ್ಪಾದನೆಯನ್ನ ಕ್ರಮವಾಗಿ ಶೇಕಡಾ 11 ಮತ್ತು 15 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಭಾರತವು ತನ್ನ ದೇಶೀಯ ಬೇಡಿಕೆಯನ್ನು ಪೂರೈಸಲು ಜಾಗತಿಕ ಮಾರುಕಟ್ಟೆಯಲ್ಲಿ ವಿವಿಧ ಮೂಲಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲವನ್ನು ಅವಲಂಬಿಸಿದೆ.



Join Whatsapp