ಮುಂಬೈ: ಮುಂಬೈನಲ್ಲಿ ಬುಧವಾರ ಒಮಿಕ್ರಾನ್ XE ರೂಪಾಂತರದ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ತಿಳಿಸಿದ್ದಾರೆ. ಒಟ್ಟು ಪರೀಕ್ಷಿಸಲಾದ 230 ಮಾದರಿಗಳಲ್ಲಿ 228 ಮಾದರಿಗಳು ಒಮಿಕ್ರಾನ್ ಗೆ ಸೇರಿವೆ. ಇನ್ನುಳಿದ ಎರಡು ಮಾದರಿಗಳಲ್ಲಿ ಒಂದು ಕಪ್ಪಾ ರೂಪಾಂತರ ಮತ್ತು ಒಂದು ಎಕ್ಸ್ಇ ರೂಪಾಂತರ ಸೇರಿವೆ ಎಂದು ಬಿಎಂಸಿ ಖಚಿತ ಪಡಿಸಿದೆ.
ಮುಂಬೈಯ ಕಸ್ತೂರ್ಬಾ ಆಸ್ಪತ್ರೆಯ ನೆಕ್ಸ್ಟ್ ಜನರೇಷನ್ ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್ ಮತ್ತು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಪರೀಕ್ಷಿಸಲಾದ ಮಾದರಿಯಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಮಿಕ್ರಾನ್ ಎಕ್ಸ್ಇ ರೂಪಾಂತರವು ಓಮಿಕ್ರಾನ್ ರೂಪಾಂತರಗಳಿಗಿಂತ ಶೇಕಡಾ 10 ರಷ್ಟು ಹೆಚ್ಚು ಹರಡಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.