ಅಪರಿಚಿತರಿಂದ ಗುಂಡಿನ ದಾಳಿ; ಓರ್ವ ಸಾವು, ಇಬ್ಬರು ಗಂಭೀರ

Prasthutha|

ಹಾಸನ: ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದಾಗ ಅಪರಿಚಿತರ ಗುಂಡಿನ ದಾಳಿಗೆ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

- Advertisement -


ನವೀನ್(39) ಸ್ಥಳದಲ್ಲೇ ಸಾವನ್ನಪ್ಪಿದ ಯುವಕ. ನವೀನ್ ಜೊತೆಯಲ್ಲಿ ಗೆಳೆಯರಾದ ದಯಾನಂದ್, ಪದ್ಮನಾಭ್, ರಾಜಾಚಾರಿ ಇದ್ದರು. ಈ ದಾಳಿಯಲ್ಲಿ ದಯಾನಂದ್ ಮತ್ತು ಪದ್ಮಾನಾಭ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp