ಕಾಡ್ಗಿಚ್ಚಿಗೆ ಕರುನಾಡ ಕಾಡುಗಳು ಕಂಗಾಲು| ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಲು ಹರಸಾಹಸ

Prasthutha|

ರಾಜ್ಯದ ಕಾಡುಗಳಲ್ಲಿ ಮತ್ತೆ ಮತ್ತೆ ಕಾಡಿಚ್ಚು ಕಾಣಿಸಿಕೊಳ್ಳುತ್ತಿದ್ದು, ಕಾಡುಗಳು ಹೊತ್ತಿ ಉರಿಯಲಾರಂಭಿಸಿವೆ. ಧಗಿಧಗಿಸುವ ಬೆಂಕಿಯನ್ನು ನಂದಿಸಲು ಅರಣ್ಯ ಸಿಬ್ಬಂದಿ, ನಾಗರಿಕರು ಹರಸಾಹಸ ಪಡುವಂತಾಗಿದೆ.

- Advertisement -

ಕೊಡಗಿನ ಭಾಗಮಂಡಲ ವ್ಯಾಪ್ತಿಯ ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಕಾಡಿಚ್ಚು ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯವರು ಹರಸಾಹಸ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ತೋಟಗಳಿಗೂ ಬೆಂಕಿ ಹರಡುವ ಆತಂಕ ಸೃಷ್ಟಿಯಾಗಿದೆ.

ಇನ್ನೊಂದೆಡೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಕಾಡಿಚ್ಚು ಮುಂದುವರಿದಿದ್ದು, ಅರಣ್ಯ ಹಾಗೂ ತೋಟಕ್ಕೂ ಬೆಂಕಿ ಬಿದ್ದಿದೆ. ಚಿಕ್ಕಮಗಳೂರಿನ ಬಸರವಳ್ಳಿ ಗ್ರಾಮದಲ್ಲಿ ಕಾಡಿಚ್ಚು ಹೊತ್ತಿಕೊಂಡಿದ್ದು, ಅರಣ್ಯ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯತ್ತಿದೆ.

- Advertisement -

ಚಾರ್ಮಾಡಿ ಘಾಟಿಯಲ್ಲೂ ಕಾಡಿಚ್ಚು ಕಾಣಿಸಿಕೊಂಡಿದ್ದು, ಗುಡ್ಡ ತುದಿಯಲ್ಲೆಲ್ಲ ಬೆಂಕಿ ಆವರಿಸಿಕೊಂಡಿದೆ. ಗುಡ್ಡದ ತುದಿಯಲ್ಲಿ ಕಾಡಿಚ್ಚು ಇರುವುದರಿಂದ ಅಗ್ನಿ ಶಾಮಕ ವಾಹನಗಳಿಗೆ ಸ್ಥಳಕ್ಕೆ ತೆರಳಲು ಸಾಧ್ಯವಾಗದೆ ಕಾಡು ಸೊಪ್ಪುಗಳನ್ನು ಬಳಸಿ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

Join Whatsapp