ಸಂಸದ ಉವೈಸಿಯನ್ನು ಕೊಲ್ಲುವ ಉದ್ದೇಶದಿಂದ ಗುಂಡಿನ ದಾಳಿ । ವಿಚಾರಣೆಯ ವೇಳೆ ಆರೋಪಿ ಸಚಿನ್ ಪಂಡಿತ್ ಹೇಳಿಕೆ

Prasthutha|

ಲಕ್ನೋ: AIMIM ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಗುಂಡು ಹಾರಿಸಿದ್ದೆ ಎಂದು ಬಂಧಿಸಲ್ಪಟ್ಟ ಪ್ರಮುಖ ಆರೋಪಿ ಸಚಿನ್ ಪಂಡಿತ್ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಬಂಧಿತ ಆರೋಪಿ ಸಚಿನ್ ಪಂಡಿತ್ ಆಡಳಿತರೂಢ ಬಿಜೆಪಿ ಕಾರ್ಯಕರ್ತ ಎಂದು ಗುರುತಿಸಲಾಗಿದ್ದು, ಸಂಸದರನ್ನು ಕೊಲ್ಲುವ ಉದ್ದೇಶದಿಂದಲೇ ವಾಹನದ ಮೇಲೆ ಗುಂಡು ಹಾರಿಸಿರುವುದಾಗಿ ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಸಂಸದ ಉವೈಸಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಭಾವಿ ರಾಜಕೀಯ ನಾಯಕನಾಗುವ ಗುರಿ ಹೊಂದಿದ್ದ ಸಚಿನ್ ಪಂಡಿತ್ ಉವೈಸಿ ಅವರ ಭಾಷಣಗಳಿಂದ ಅಸಮಾಧಾನಗೊಂಡು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ಹೇಳಲಾಗಿದೆ.



Join Whatsapp