ಡಾಕಾದ ಕಾರ್ಖಾನೆಯಲ್ಲಿ ಬೆಂಕಿ ಅವಘಡ | 52 ಮಂದಿ ಮೃತ್ಯು

Prasthutha|

ಡಾಕಾ : ಜ್ಯೂಸ್ ಕಾರ್ಖಾನೆಯಲ್ಲಿ ಬೆಂಕಿ ಸಂಭವಿಸಿ ಕನಿಷ್ಠ 52 ಮಂದಿ ಸಾವನ್ನಪ್ಪಿರುವ ಘಟನೆ  ಬಾಂಗ್ಲಾದೇಶದ ರಾಜಧಾನಿ ಡಾಕಾದ ಹೊರ ವಲಯದ ಆರು ಅಂತಸ್ತಿನ ಕಟ್ಟಡದಲ್ಲಿ ನಡೆದಿದೆ.

- Advertisement -

ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇರುವುದರಿಂದ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಇತರ ಅಂತಸ್ತಿಗೆ ಹರಡಿತು ಎಂದು ಶಂಕಿಸಲಾಗಿದೆ. ನರಿಯಾಂಗಂಜ್ ಪ್ರದೇಶದ ರುಪ್ ಗಂಜ್ನ ಶೆಝಾನ್ ಜ್ಯೂಸ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿಯಲ್ಲಿ ಐವತ್ತೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಬೆಂಕಿಯಿಂದ ಪಾರಾಗಲು ಹಲವಾರು ಕಾರ್ಮಿಕರು ಕಟ್ಟಡದಿಂದ ಹೊರಗೆ ಹಾರಿದರು ಎಂದು ಅದು ಹೇಳಿದೆ. ಕಾರ್ಖಾನೆಯ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ಹದಿನೆಂಟು ಅಗ್ನಿಶಾಮಕ ಘಟಕಗಳು ಪ್ರಯತ್ನಿಸಿದವು ಎಂದು ವರದಿಯಾಗಿದೆ.

- Advertisement -

ಬೆಂಕಿಯ ಕಾಣಿಸಿಕೊಂಡ ಸಮಯದಲ್ಲಿ ಕಾರ್ಖಾನೆಯಿಂದ ತಪ್ಪಿಸಿಕೊಳ್ಳಲು ಮುಂಭಾಗದ ಗೇಟ್‌‌ನಿಂದ ನಿರ್ಗಮಿಸಬೇಕಿತ್ತಾಗಿದ್ದರೂ, ಅದನ್ನು ಲಾಕ್ ಮಾಡಲಾಗಿತ್ತು ಎಂದು ಘಟನೆಯಲ್ಲಿ ಜೀವ ಉಳಿಕೊಂಡ ಕಾರ್ಮಿಕರು ಮತ್ತು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಕಟ್ಟಡದಲ್ಲಿ ಸರಿಯಾದ ಅಗ್ನಿ ಸುರಕ್ಷತಾ ಕ್ರಮಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ಕಾಣೆಯಾದ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಕಟ್ಟಡದ ಮುಂದೆ ಜಮಾಯಿಸಿದ್ದು, 44 ಕಾರ್ಮಿಕರ ಗುರುತುಗಳು ದೃಡಪಟ್ಟಿದೆ ಎಂದು ಪತ್ರಿಕೆ ತಿಳಿಸಿದೆ.

Join Whatsapp