ಬಸ್‌ಗಳಲ್ಲಿ ಇಂದಿನಿಂದ ಪಟಾಕಿ ತಪಾಸಣೆ, ಪತ್ತೆಯಾದರೆ ಕಠಿಣ ಕ್ರಮ: ಸಾರಿಗೆ ಇಲಾಖೆ ಎಚ್ಚರಿಕೆ

Prasthutha|

ಬೆಂಗಳೂರು: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಟಾಕಿಸಾಗಾಟ ನಿಷೇಧಿಸಿರುವ ಸಾರಿಗೆ ಇಲಾಖೆ, ಆದೇಶ ಮೀರಿ ಸಾಗಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇತ್ತೀಚಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ಸಂಭವಿಸಿ 16 ಜನ ದಾರುಣವಾಗಿ ಮೃತಪಟ್ಟಿರುವ ಘಟನೆಯ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಇದೀಗ ಈ ಬಗ್ಗೆ ಜಾಗರೂಕವಾಗಿದೆ.

- Advertisement -

ಪ್ರಯಾಣಿಕರು ತಮ್ಮೊಂದಿಗೆ ಪಟಾಕಿ ತೆಗೆದುಕೊ೦ಡು ಹೋಗುತ್ತಿಲ್ಲ ಎಂಬುದನ್ನು ಖಾಸಗಿ ಬಸ್ ನಿರ್ವಾಹಕರು ಖಾತರಿಪಡಿಸಿಕೊಳ್ಳಬೇಕು. ಪೊಲೀಸರು ಅಲ್ಲಲ್ಲಿ ಚೆಕ್ ಮಾಡಲಿದ್ದಾರೆ. ಒಂದು ವೇಳೆ ಪಟಾಕಿ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾದರೆ ಅಂತಹ ಪ್ರಯಾಣಿಕರು ಹಾಗೂ ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ವಾಹನಗಳನ್ನು ಹೊರತುಪಡಿಸಿ ಗೂಡ್ಸ್‌ ವಾಹನಗಳಲ್ಲಿ ಪಟಾಕಿ ಸಾಗಣೆಗೆ ಅವಕಾಶ ನೀಡಲಾಗಿದ್ದರೂ, ಅದಕ್ಕೆ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಪಡೆಯದೇ ಪಟಾಕಿ ತೆಗೆದುಕೊ೦ಡು ಹೋದರೆ ವಾಹನಗಳ ಪರ್ಮಿಟ್ ಕ್ಯಾನ್ಸಲ್ ಮಾಡಿ, ವಶಕ್ಕೆ ಪಡೆಯೋದಾಗಿಯೂ ಸಾರಿಗೆ ಇಲಾಖೆ ನಿರ್ಧರಿಸಿದೆ.

- Advertisement -

ಪಟಾಕಿ ಸಾಗಾಟದಲ್ಲಿನ ಲೋಪಗಳನ್ನು ಪತ್ತೆ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳು ಇಂದಿನಿಂದ ತಪಾಸಣಾ ಕಾರ್ಯ ನಡೆಸಲಿದ್ದಾರೆ ಎಂದೂ ಸಾರಿಗೆ ಇಲಾಖೆ ತಿಳಿಸಿದ್ದು, ಪ್ರಯಾಣಿಕರು ಬಸ್ಸುಗಳಲ್ಲಿ ಪಟಾಕಿಗಳನ್ನು ಸಾಗಿಸುತ್ತಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಪ್ರಯಾಣಿಕರು ಯಾವುದೇ ರೀತಿಯಾಗಿ ಪಟಾಕಿ ವಸ್ತುಗಳನ್ನು ಬಸ್‌ನಲ್ಲಿ ಕೊಂಡ್ಯದೇ ಕಠಿಣ ಕ್ರಮದಿಂದ ತಪ್ಪಿಸಿಕೊಳ್ಳೋದು ಒಳ್ಳೆಯದು.



Join Whatsapp