ಮನಿಲಾ: ಫಿಲಿಪೈನ್ಸ್ ರಾಜಧಾನಿಯಲ್ಲಿರುವ ರಷ್ಯಾದ ರಾಯಭಾರ ಕಚೇರಿಯಲ್ಲಿ ಫೆಬ್ರವರಿ 5 ರಂದು ಬೆಂಕಿ ದುರಂತ ಸಂಭವಿಸಿದ್ದು, ನೌಕರರು ಮತ್ತು ಅವರ ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸಲಾಯಿತು. ಆದರೆ ಯಾವುದೇ ಗಾಯಗಳಾಗಿಲ್ಲ ಎಂದು ರಷ್ಯಾ ಮತ್ತು ಫಿಲಿಪಿನೋ ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಮೆಟ್ರೋಪಾಲಿಟನ್ ಮನಿಲಾದ ಮಕಾಟಿ ನಗರದ ಹಣಕಾಸು ಜಿಲ್ಲೆಯ ರಾಯಭಾರ ಕಚೇರಿಯ ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಫಿಲಿಪೈನ್ಸ್ ಬ್ಯೂರೋ ಆಫ್ ಫೈರ್ ಪ್ರೊಟೆಕ್ಷನ್ ಹೇಳಿದೆ.
ಹಲವಾರು ರಾಯಭಾರ ಕಚೇರಿಗಳು ಮತ್ತು ರಾಜತಾಂತ್ರಿಕ ನಿವಾಸಗಳು ನೆಲೆಗೊಂಡಿರುವ ಉನ್ನತ ಮಟ್ಟದ ಮತ್ತು ಬಿಗಿಯಾಗಿ ಕಾವಲು ಹೊಂದಿರುವ ದಸ್ಮರಿನಾಸ್ ಗ್ರಾಮದಲ್ಲಿ ಒಂದು ಡಜನ್ಗಿಂತಲೂ ಹೆಚ್ಚು ಫೈರ್ ಟ್ರಕ್ ಗಳು ಬೆಂಕಿಯನ್ನು ನಂದಿಸಲು ಸಹಾಯ ಮಾಡಿದವು ಎಂದು ತಿಳಿದು ಬಂದಿದೆ.